ಜಿಲ್ಲೆ

ಆ.11ರಂದು ಸಂಜಯ ಪ್ರಕಾಶನದ 100ನೇ ಕಾರ್ಯಕ್ರಮ: ಯೋಗಗುರು ಅಪ್ಪಾಜಿ ಕೆ.ಶೆಟ್ಟಹಳ್ಳಿ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಂಜಯ ಪ್ರಕಾಶನದ 100ನೇ ಕಾರ್ಯಕ್ರಮ ಆ.11ರಂದು ಬೆಳಗ್ಗೆ 10.30 ಗಂಟೆಗೆ ಶ್ರೀರಂಗಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಯೋಗಗುರು ಅಪ್ಪಾಜಿ ಕೆ.ಶೆಟ್ಟಹಳ್ಳಿ ಹೇಳಿದರು.

ಪ್ರಕಾಶನ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಅವರು ವಿಶ್ವ ಸಹೋದರತ್ವಕ್ಕೆ ಕದನದ ಕರಿ ನೆರಳು ವಿಷಯದಲ್ಲಿ ವಿಚಾರ ಮಂಡಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿದ್ಯಾರ್ಥಿಗಳು ದೃಶ್ಯ ಮಾಧ್ಯಮಗಳ ಹಾವಳಿಯಿಂದ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಗಳಿಂದ ದೂರ ಸರಿಯುತ್ತಿದ್ದಾರೆ. ಈ ಹಿನ್ನೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಸಮುದಾಯವನ್ನು ಇತ್ತ ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ಸಂಜಯ ಪ್ರಕಾಶನದಿಂದ ಪ್ರತಿ ತಿಂಗಳು ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಲವಾರು ವರ್ಷಗಳಿಂದ ನಡೆಸಲಾಗುತ್ತಿದೆ. ಇದು ನೂರನೇ ಕಾರ್ಯಕ್ರಮ. ಅಂದಿನ ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣದ ವೈದ್ಯ ಡಾ.ಬಿ.ಸುಜಯ್ ಕುಮಾರ್ ಆಶಯನುಡಿಯಾಡುವರು. ಚಾಮರಾಜನಗರ ದೀನ ಬಂಧು ಸಂಸ್ಥೆಯ ಪ್ರೊ.ಜಿ.ಎಸ್.ಜಯದೇವ ಅಧ್ಯಕ್ಷತೆ ವಹಿಸುವರು ಎಂದರು.

ಸಂಜಯ ಪ್ರಕಾಶನದ ಅಧ್ಯಕ್ಷ ಶಿವಕುಮಾರ್, ಸಮರ್ಪಣ ಟ್ರಸ್ಟ್‌ನ ಜಯಶಂಕರ್ ಇದ್ದರು.