ಬೆಳಗಾವಿಯ ಮಾಳಮಾರುತಿ ಠಾಣೆ ಸಿಪಿಐ ಬಿ.ಆರ್. ಗಡ್ಡೇಕರ್ ಅವರಿಗೆ ಡಾ. ವಿ.ಎ. ಕೋಠಿವಾಲೆ ಮಾಸ್ಕ್ ವಿತರಿಸಿದರು. ಡಾ. ಅಶ್ವಿನಿ ನರಸಣ್ಣವರ, ಎಸ್.ಜಿ. ಪಾಟೀಲ ಇದ್ದರು. 
ಜಿಲ್ಲೆ

ಸ್ಯಾನಿಟೈಸರ್, ಮಾಸ್ಕ್ ವಿತರಣೆ

Belagavi

ಬೆಳಗಾವಿ: ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್‌ನ ಎನ್‌ಎಸ್‌ಎಸ್ ಘಟಕದ ವತಿಯಿಂದ ಮಾಳಮಾರುತಿ ಠಾಣೆ ಪೊಲೀಸರಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಲಾಯಿತು. ಕುಲಸಚಿವ ಡಾ. ವಿ.ಎ. ಕೋಠಿವಾಲೆ ಮಾತನಾಡಿ, ಕರೊನಾ ಸೋಂಕು ನಿಯಂತ್ರಣಕ್ಕಾಗಿ ದುಡಿಯುತ್ತಿರುವ ಪೊಲೀಸರ ಸೇವೆ ಶ್ಲಾಘನೀಯ. ನೀವು ಸುರಕ್ಷತೆಗೆ ಒತ್ತು ನೀಡಬೇಕು. ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ಸಿಪಿಐ ಬಿ.ಆರ್. ಗಡ್ಡೇಕರ್, ಡಾ.ಅಶ್ವಿನಿ ನರಸಣ್ಣವರ, ಎಸ್.ಜಿ. ಪಾಟೀಲ, ಡಾ.ರವೀಂದ್ರ ಹೊನ್ನುಂಗರ ಇದ್ದರು.