ಚನ್ನರಾಯಪಟ್ಟಣದ ಶಾಸಕರ ನಿವಾಸದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಕುಸುಮಾ ಬಾಲಕೃಷ್ಣ ಬಾಗಿನ ನೀಡಿದರು. 
ಜಿಲ್ಲೆ

ಸ್ವಚ್ಛತೆಯಲ್ಲಿ ದೇವರನ್ನು ಕಾಣುತ್ತಿರುವ ಸ್ವಚ್ಛತಾ ಕಾರ್ಮಿಕರು

ಅಭಿನಯ್ ಎಚ್.ಎಂ

ಚನ್ನರಾಯಪಟ್ಟಣ: ಪಟ್ಟಣದ ಆದರ್ಶನಗರದಲ್ಲಿರುವ ಶಾಸಕರ ನಿವಾಸ ಸ್ನೇಹಸೌದದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ಗೌರಿ ಹಬ್ಬದ ಪ್ರಯುಕ್ತ ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡಿದರು.

ಪಟ್ಟಣದ 43 ಮಹಿಳಾ ಪೌರಕಾರ್ಮಿಕರಿಗೆ ಬಾಗಿನ, ಸೀರೆಗಳನ್ನು ನೀಡಿ ಮಾತನಾಡಿದ ಕುಸುಮಾ ಬಾಲಕೃಷ್ಣ, ಎಲ್ಲರೂ ಮನೆಯಲ್ಲಿ ಹೊಸ ಬಟ್ಟೆ ತೊಟ್ಟು ಗೌರಿ ಪೂಜೆ ಮಾಡಿದ್ದಾರೆ.

ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ದೇವರನ್ನು ಕಾಣುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಬಾಗಿನ ನೀಡಲಾಗಿದೆ. ಪಟ್ಟಣ ಸುಂದರ ಹಾಗೂ ಸ್ವಚ್ಛವಾಗಿ ಕಾಣಲು ಪೌರಕಾರ್ಮಿಕರ ಶ್ರಮ ಹೆಚ್ಚು. ಅಂತಹವರನ್ನು ಗುರುತಿಸಿ ಬಾಗಿನ ನೀಡಿರುವುದು ನಮಗೂ ಸಂತೋಷ ಎಂದು ಹೇಳಿದರು.

ಪುರಸಭಾಧ್ಯಕ್ಷ ಸಿ.ಎನ್.ಮೋಹನ್, ಮುಖಂಡರಾದ ರಾಜು ಇತರರಿದ್ದರು.