ಉಡುಪಿ: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಂಗೊಳ್ಳಿ ರಾಯಣ್ಣ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. 228ನೇ ಜಯಂತಿಯೊಳಗೆ ನಗರದಲ್ಲಿ ಯಾವುದಾದರೊಂದು ಕಡೆಯಲ್ಲಿ ರಾಯಣ್ಣನ ಪ್ರತಿಮೆ ಸಹಿತ ವೃತ್ತ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಬೈಲಹೊಂಗಲದ ದುರ್ಗಾದೇವಿ ದೇವಸ್ಥಾನದ ಧರ್ಮದರ್ಶಿ ಶ್ರೀ ಮಹಾಂತಯ್ಯ ಸ್ವಾಮೀಜಿ ಹೇಳಿದರು.
ಭಾನುವಾರ ಬನ್ನಂಜೆ ಶ್ರೀ ನಾರಾಯಣ ಗುರು ಅಡಿಟೋರಿಯಂನಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ನಡೆದ 227ನೇ ರಾಯಣ್ಣ ಉತ್ಸವ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಹುಟ್ಟುವಾಗ ಹಿಂದುಗಳಾಗಿರುವ ನಾವು ಬೆಳೆಯುತ್ತಾ ಜಾತಿಗೆ ಸೀಮಿತವಾಗಬಾರದು. ಪ್ರತಿ ಮನೆಯಲ್ಲೂ ರಾಯಣ್ಣನಂಥ ವೀರರು ಹುಟ್ಟಿ ಬರಬೇಕು. ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸುವ ಮೂಲಕ ಕನ್ನಡ ತಾಯಿಯ ಋಣ ತೀರಿಸಬೇಕು. ಮಕ್ಕಳನ್ನು ಸೈನ್ಯಕ್ಕೆ ಸೇರಲು, ರೈತನಾಗಲು ಪ್ರೇರೇಪಿಸಬೇಕು ಎಂದು ಹೇಳಿದರು.
ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ಸಂದ ಗೌರವಾಧ್ಯಕ್ಷ ಜನಾರ್ದನ್ ಕೊಡವೂರು ಪ್ರಸ್ತಾವನೆಗೈದರು.
ನಗರಸಭೆ ಸದಸ್ಯ ವಿಜಯ ಕೊಡವೂರು ದಿಕ್ಸೂಚಿ ಭಾಷಣ ಮಾಡಿದರು. ತ್ರಿಷಿಕಾ ಹಿಂದುಳಿದ ಮಹಿಳಾ ಅಭಿವೃದ್ಧಿ ಸಂದ ರಾಜ್ಯಾಧ್ಯಕ್ಷೆ ಭಾಗ್ಯಶ್ರೀ ಬಾಬಣ್ಣ, ತುಳುಕೂಟದ ಅಧ್ಯಕ್ಷೆ ಜಯಕರ ಶೆಟ್ಟಿ ಇಂದ್ರಾಳಿ, ಬಾಗಲಕೋಟೆಯ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಬರಮು ಪೂಜಾರಿ, ಉಡುಪಿಯ ಕನಕದಾಸ ಸಮಾಜ ಸೇವಾ ಸಂದ ಅಧ್ಯಕ್ಷ ಹನುಮಂತ ಡೊಳ್ಳಿನ, ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಹನುಮಂತ ಜಿ.ಗೋಡಿ, ಪ್ರಮುಖರಾದ ಶಿವಾನಂದ ಕೋಳ್ಕರ್, ರಾಜು ಬೋಳನ್ನವರ್ ಉಪಸ್ಥಿತರಿದ್ದರು.
ಸಂಟನೆ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ಸಮಾಜ ಸೇವಕ ಆಪತ್ಬಾಂಧವ ಈಶ್ವರ್ ಮಲ್ಪೆ ಆವರಿಗೆ ರಾಯಣ್ಣ ಪುರಸ್ಕಾರ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ರಾಯಣ್ಣ ಪ್ರತಿಮೆಗೆ ರಾಭಿಷೇಕ ನಡೆಯಿತು. ಕುಂಭ ಮೆರವಣಿಗೆ ಶ್ರೀ ನಾರಾಯಣ ಗುರು ಅಡಿಟೋರಿಯಂ ಬನ್ನಂಜೆಯಿಂದ ಆರಂಭಗೊಂಡು ರಥ ಬೀದಿಯ ಕನಕ ಗೋಪುರದವರೆಗೆ ಕುಂಭ ಮೇಳ ನಡೆಯಿತು. ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.