ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಮನುಷ್ಯ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಅನುಕೂಲವಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವು ನೀಡುತ್ತಿದೆ ಎಂದು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಾಪುವಿನಲ್ಲಿ ಮಂಗಳವಾರ ಆಯೋಜಸಿದ್ದ ಕಾಪು ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಮಾಜಿ ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ, ಬ್ಯಾಂಕ್ ಅಫ್ ಬರೋಡ ಕಾಪು ಶಾಖೆ ಪ್ರಬಂಧಕ ಶಿವಪ್ರಸಾದ್, ಧಾರ್ಮಿಕ ಚಿಂತಕ ದಾಮೋದರ ಶರ್ಮ ಬಾರ್ಕೂರು, ಉದಯಕುಮಾರ್ ಶೆಟ್ಟಿ ಇನ್ನಾ, ಎಂಐಎಸ್ ಯೋಜನಾಧಿಕಾರಿ ಸ್ವಪ್ನಾ, ಆರು ವಲಯ ಒಕ್ಕೂಟ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಶಿರ್ವ, ಸುಜಯ ಶೆಟ್ಟಿ ಕಾಪು, ಪ್ರಸಾದ್ ಆಚಾರ್ಯ ಉಚ್ಚಿಲ, ಗಣಪತಿ ಬೆಲ್ಮನ್, ಸುಮತಿ ಮುದರಂಗಡಿ, ಸುಮನಾ ಕಿಶೋರ್ ಪಡುಬಿದ್ರಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ವಂದಿಸಿದರು. ಗೀತಾ ಕಾರ್ಯಕ್ರಮ ನಿರೂಪಿಸಿದರು.
ಬ್ಯಾಂಕ್ ಅಫ್ ಬರೋಡದ ಧರ್ಮಸ್ಥಳ ಶಾಖೆ ವ್ಯವಸ್ಥಾಪಕ ನಿತಿನ್ ಶೆಟ್ಟಿ ಬ್ಯಾಂಕಿಂಗ್ ಕುರಿತು ಮಾಹಿತಿ ನೀಡಿದರು. ದಶ ಅಂಶಗಳು ಹಾಗೂ ಯೋಜನೆಯ ಸ್ವ ಸಹಾಯ ಸಂಘ ವ್ಯವಸ್ಥೆ ಕುರಿತು ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ವಿವರಿಸಿದರು. ಯೋಜನೆಯ ವಿವಿಧ ಕಾರ್ಯಕ್ರಮಗಳು, ತಾಲೂಕಿನಲ್ಲಿ ಕೈಗೊಳ್ಳಲಾದ ಸಾಧನೆಗಳ ಬಗ್ಗೆ ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಮಾಹಿತಿ ನೀಡಿದರು.