ಜಿಲ್ಲೆ

ಹಿಂದು ಸಮಾಜ ಸಂಘಟನೆಗೆ ಸಂಘ ಶ್ರಮ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ : ಹಿಂದು ಸಮಾಜವು ಸಂಟಿತವಾಗಬೇಕು. ಸಾಮರಸ್ಯ ತುಂಬಿರಬೇಕು, ದೇಶ ಗೌರವಿಸಬೇಕು ಎನ್ನುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂ ಶ್ರಮಿಸುತ್ತಿದೆ. ಈ ಸೇವೆಯಲ್ಲಿ ನೂರು ವರ್ಷಗಳನ್ನು ಪೂರೈಸಿದೆ ಎಂದು ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣ ಜೋಶಿ ಹೇಳಿದರು.

ಪಟ್ಟಣದ ಭಂಡಾರಿ ಕಾಲೇಜಿನಲ್ಲಿ ಮೈದಾನದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂದ ವಿಜಯದಶಮಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.

ದೇಶದ ಮೂಲಸತ್ವ ಹಿಂದುತ್ವ. ಆದರೆ ಜಾತಿ ಜಾತಿಗಳಿಂದ ಹಿಂದು ಸಮಾಜ ಒಡೆದು ಹೋಗಿತ್ತು. ಅದನ್ನು ಒಗ್ಗೂಡಿಸುವ ಕೆಲಸ ಸಂ ಮಾಡುತ್ತಿದೆ. ಮತ್ತೆ ಪರಮ ವೈಭವ ತರಬೇಕು ಎನ್ನುವ ಆಶಯ ಇಟ್ಟುಕೊಂಡಿದೆ. ಡಾ. ಹೆಗಡೇವಾರ ಅವರು ಕನಸು ಇದೀಗ ಸಾಕಾರಗೊಳ್ಳುತ್ತಿದೆ ಎಂದರು.ಹಿಂದು ಧಾರ್ಮಿಕ ಕೇಂದ್ರಗಳನ್ನು ಟಾರ್ಗೇಟ್​ ಮಾಡಲಾಗಿದೆ. ದೇಶದ ಈಶಾನ್ಯ ಭಾಗದಲ್ಲಿ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಹಿಂದುಗಳು ಎರಡನೇ ದರ್ಜೆಯ ಪ್ರಜೆಗಳಾಗಿ ಬದುಕಬೇಕು ಎನ್ನುವ ನೀತಿ ಕೆಲವು ಸರ್ಕಾರಗಳು ಮಾಡುತ್ತಿವೆ.

ದೇಶ ಒಡೆಯವ, ಸಮಾಜ ದುರ್ಬಲ ಮಾಡುವ ಚಟುವಟಿಕೆಗಳ ನಡುವೆಯೂ ಸಂ ಬೆಳೆಯುತ್ತದೆ. ಯಾವುದು ಧರ್ಮ ದ್ರೋಹಿ, ಯಾವುದು ದೇಶ ವಿರೋಧಿ, ಯಾವುದು ಮಾನವತೆಯ ವಿರೋಧಿಯೋ ಅದನ್ನು ಸರಿಮಾಡುವ ಕೆಲಸವನ್ನು ಸಂ ಮಾಡುತ್ತಿದೆ ಹೇಳಿದರು.

ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯ ಸದಾಶಿವ ಸ್ವಾಮೀಜಿ, ಮುರುಘಾಮಠದ ಕಾಶೀನಾಥ ಸ್ವಾಮೀಜಿ, ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ, ಸಂದ ಸಂಚಾಲಕ ಚಂದ್ರಶೇಖರ ದೊಡಮನಿ ಇದ್ದರು.

ಗುಳೇದಗುಡ್ಡದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂದ ವಿಜಯದಶಮಿ ಉತ್ಸವದಲ್ಲಿ ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣ ಜೋಶಿ ಮಾತನಾಡಿದರು.