ಜಿಲ್ಲೆ

ಅ.5 ರಂದು ಕರ್ನಾಟಕೀ- ಹಿಂದೂಸ್ತಾನಿ ಜುಗಲ್ ಬಂದಿ

Mangaluru - Hariprasad Rai

ಮಂಗಳೂರು : ಸಂಗೀತ ಭಾರತಿ ೌಂಡೇಶನ್ ವತಿಯಿಂದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಬೆಂಗಳೂರಿನ ಸೆಂಚುರಿ ಗ್ರೂಪ್‌ನ ಅಧ್ಯಕ್ಷ ಡಾ.ಪಿ.ದಯಾನಂದ ಪೈ ಅವರ ಸಹಯೋಗದಲ್ಲಿ ಅ.5 ರಂದು ಸಾಯಂಕಾಲ 5.30ಕ್ಕೆ ನಗರದ
ಪುರಭವನದಲ್ಲಿ ‘ವಿಹಂಗಮ’ ಕರ್ನಾಟಕೀ ಮತ್ತು ಹಿಂದೂಸ್ತಾನಿ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು ನಗರದ ಪೋಲಿಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು
ಸಂಗೀತ ಭಾರತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ವಿದ್ವಾನ್ ಡಾ.ಮೈಸೂರು ಮಂಜುನಾಥ್ ಮತ್ತು ಉಸ್ತಾದ್ ರಫೀಕ್ ಖಾನ್ ಇವರಿಂದ ವಯೋಲಿನ್-ಸಿತಾರ್ ಜುಗಲ್ ಬಂದಿ ನಡೆಯಲಿದೆ. ಮೃದಂಗದಲ್ಲಿ ಚೆನ್ನೈನ ವಿದ್ವಾನ್ ತಿರುವಾರೂರು ಭಕ್ತವತ್ಸಲಂ ಮತ್ತು ತಬ್ಲಾದಲ್ಲಿ ಮುಂಬೈಯ ಓಜಸ್ ಆದಿವು ಅವರು ಸಾಥ್ ನೀಡಲಿದ್ದಾರೆ.
ಮಂಗಳೂರಿನ ಜನತೆಗೆ ಶ್ರೇಷ್ಠಮಟ್ಟದ ವಯೋಲಿನ್-ಸಿತಾರ್ ಜುಗಲ್ ಬಂದಿ ಕೇಳುವ ಅವಕಾಶ ದೊರೆತಿದೆ. ತಮ್ಮದೇ ಕ್ಷೇತ್ರದಲ್ಲಿ ವಿಶ್ವಖ್ಯಾತಿ ಪಡೆದ ಕಲಾವಿದರು ಒಂದೇ ವೇದಿಕೆಯಲ್ಲಿ ತಮ್ಮ ವಾದನದ ನೈಪುಣ್ಯತೆಯನ್ನು ಜನರ ಮುಂದೆ ಪ್ರಸ್ತುತ ಪಡಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದೆ ಎಂದು ಅವರು ತಿಳಿಸಿದರು.
ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಖಜಾಂಚಿ ಕರುಣಾಕರ ಬಳ್ಕೂರು, ಟ್ರಸ್ಟಿಗಳಾದ ಮುರಳೀಧರ್ ಜಿ ಶೆಣೈ, ಡಾ.ರಮೇಶ್ ಕೆ ಜಿ ಹಾಗೂ ಅಂಕುಶ್ ಎನ್ ನಾಯಕ್ ಉಪಸ್ಥಿತರಿದ್ದರು.