ಮೈಸೂರು: ಹೊಸ ವರ್ಷದ ಅಂಗವಾಗಿ ವಿ.ವಿ. ಕ್ರಿಯೇಷನ್ ವತಿಯಿಂದ ಜಾನಪದ ಕಲಾವಿದರಿಗೆ ಉತ್ತೇಜನ ನೀಡುವ ಉದ್ದೇಶದಿಂದ ‘ನವ ಸಂಭ್ರಮ ಸಂಗೀತ ನೃತ್ಯ ಸಂಗಮ’ ಮನರಂಜನಾತ್ಮಕ ಕಾರ್ಯಕ್ರಮವನ್ನು ಜ.6ರ ಸಂಜೆ 4ಕ್ಕೆ ವಿಶ್ವೇಶ್ವರನಗರದಲ್ಲಿರುವ ಎಂಬಿಸಿಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಾನಪದ ಪ್ರಕಾರಗಳಾದ ಕಂಸಾಳೆ, ಡೊಳ್ಳು ಕುಣಿತ, ತಮಟೆ, ಜಾನಪದ ಗಾಯನ ಹಾಗೂ ನೃತ್ಯ, ಬುಡಕಟ್ಟು ಸಮುದಾಯದ ನೃತ್ಯ ಪ್ರದರ್ಶನ ನಡೆಯಲಿದೆ.