ಕಿನ್ನಿಗೋಳಿ: ಎಕ್ಕಾರು ನೀರುಡೆ ಮೈದಾನದಲ್ಲಿ ಮಾ.8, 9ರಂದು ನಡೆದ ಆಹ್ವಾನಿತ ಎಂಟು ತಂಡಗಳ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯದ ಫೈನಲ್‌ನಲ್ಲಿ ತುಕರಾಮ ಪೂಜಾರಿ ಮಾಲೀಕತ್ವದ ಕಾಯ್ದಂಡ ಸ್ಟ್ರೈಕರ್ಸ್ ತಂಡ ಸಂಗಮ್ ಪ್ರೀಮಿಯರ್ ಲೀಗ್ ಟ್ರೋಫಿ ತನ್ನದಾಗಿಸಿಕೊಂಡಿತು.
ಪ್ರಶೀಲ್ ಶೆಟ್ಟಿ ಮಾಲೀಕತ್ವದ ಎಸ್‌ಡಿಎಂ ಕಿಲೆಂಜೂರು ತಂಡ ದ್ವಿತೀಯ ಸ್ಥಾನ ಗಳಿಸಿತು. ಜಿಲ್ಲಾ ಪ್ರಶಸ್ತಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿಜಯ ಯುವ ಸಂಗಮ ಎಕ್ಕಾರು ಆಶ್ರಯದಲ್ಲಿ ಪಂದ್ಯ ಆಯೋಜಿಸಲಾಗಿತ್ತು.
ಎಕ್ಕಾರು ಶ್ರೀಕೃಷ್ಣ ಮಠ ಹರಿದಾಸ ಉಡುಪ ಕ್ರೀಡಾಕೂಟ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಕಿಶೋರ್ ಕುಮಾರ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಗೌರಾವಧ್ಯಕ್ಷರಾದ ರತ್ನಾಕರ ಶೆಟ್ಟಿ, ಭುಜಂಗ ಶೆಟ್ಟಿ, ಸದಾಶಿವ ಶೆಟ್ಟಿ, ಮೋಹಿತ್ ಮಲ್ಲಿ ಕಾವೂರು, ಈಶ್ವರ್ ಕಟೀಲು, ಕಸ್ತೂರಿ ಪಂಜ, ರೋನಾಲ್ಡ್ ಫರ್ನಾಂಡಿಸ್, ದಯಾನಂದ ಮಾಡ, ಶಂಕರ್ ಶೆಟ್ಟಿ, ಪ್ರಕಾಶ್ ಕುಕ್ಯಾನ್, ರಿತೇಶ್ ಶೆಟ್ಟಿ, ಪ್ರವೀಣ್ ಸಂಕಲಕರಿಯ, ಶ್ರೀಶ ಸರಫ್, ಚಂದ್ರಹಾಸ ಪೂಜಾರಿ, ಸಿ.ಎ.ಶರತ್ ಶೆಟ್ಟಿ, ಸುದೀಪ್ ಅಮೀನ್, ಅಜಿತ್ ಶರ್ಮ, ಶಿವಾನಂದ ಶೆಟ್ಟಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.