ಮಂಗಳೂರು: ಧ್ವನಿ ಬೆಳಕು ಮಾಲೀಕರ ಸಂಘ ಮಂಗಳೂರು ತಾಲೂಕು ಕಾವೂರು ವಲಯ ಆಶ್ರಯದಲ್ಲಿ ಧ್ವನಿ ಬೆಳಕು ಸಂಘದ ಸಂಗಮ ಸಂಭ್ರಮ ಕಾರ್ಯಕ್ರಮ ಶನಿವಾರ ಕಾವೂರಿನಲ್ಲಿ ನಡೆಯಿತು.
ಕಾರ್ಪೊರೇಟರ್ ಸುಮಂಗಲಾ ರಾವ್ ಉದ್ಘಾಟಿಸಿದರು. ಕಾವೂರು ವಲಯ ಧ್ವನಿ ಬೆಳಕು ಮಾಲೀಕರ ಸಂಘದ ಅಧ್ಯಕ್ಷ ದಾಮೋದರ ಭಾಗವತ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾಲೂಕು ಧ್ವನಿ ಬೆಳಕು ಮಾಲೀಕರ ಸಂಘದ ಅಧ್ಯಕ್ಷ ಬೆನೆಟ್ ಡಿಸಿಲ್ವ, ಕಾವೂರು ಪೊಲೀಸ್ ಠಾಣೆ ಠಾಣಾಧಿಕಾರಿ ಮಲ್ಲಿಕಾರ್ಜುನ ಬಿರದೂರು, ದ.ಕ. ಜಿಲ್ಲಾ ಶಾಮಿಯಾನ ಮಾಲೀಕರ ಒಕ್ಕೂಟ ಅಧ್ಯಕ್ಷ ಯುವರಾಜ್ ಮೂಡುಗುಡ್ಡೆ, ದ.ಕ. ಜಿಲ್ಲಾ ಡೆಕೊರೇಶನ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಅಶ್ವಥ್ ಕೊಟ್ಟಾರಿ, ದ.ಕ. ಜಿಲ್ಲಾ ಕ್ಯಾಟರಿಂಗ್ ಮಾಲೀಕರ ಒಕ್ಕೂಟದ ಅಧ್ಯಕ್ಷ ದೀಪಕ್ ಕೋಟ್ಯಾನ್, ಪ್ರಮುಖರಾದ ಪೀಟರ್ ಡಿಸೋಜ, ನಿತ್ಯಾನಂದ ಕೆ., ಅಶೋಕ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸಾಧಕ ವಿದ್ಯಾರ್ಥಿಗಳು ಹಾಗೂ ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಬಳಿಕ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಸಮಂಜರಿ ಹಾಗೂ ವಿಠಲ ನಾಯಕ್ ಕಲ್ಲಡ್ಕ ಅವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು. ವಿಶ್ವನಾಥ ಅಡಿಗ ಸ್ವಾಗತಿಸಿ, ಕೃಷ್ಣಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಅಮೀನ್ ವಂದಿಸಿದರು.