ಜಿಲ್ಲೆ

ಸಾಣೇಹಳ್ಳಿ ತಂಡದಿಂದ ನಾಟಕೋತ್ಸವ

ರುದ್ರಪ್ಪ ವಾಲಿ

ಮುಗದಲ್: ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಮುದಗಲ್‌ನಲ್ಲಿ ನ.28 ರಿಂದ 3 ದಿನ ಸಾಣೇಹಳ್ಳಿಯ ಶಿವಸಂಚಾರ ವತಿಯಿಂದ ನಾಟಕೋತ್ಸವ ಪ್ರದರ್ಶನ ನಡೆಯಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗೌಡರ್ ಹೇಳಿದರು.

ಮುದಗಲ್‌ನ ಎಸ್.ವಿ.ಎಂ ಪ್ರೌಢಶಾಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾನಪದ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅಶೋಕಗೌಡ, ಸುರೇಂದ್ರಗೌಡ ಆದಾಪೂರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ಯ ಸ್ಥಳೀಯ ಅನ್ನದಾನಗೌಡ ಪಟೀಲ್ ಬಯ್ಯಪುರ ಪದವಿ ಕಾಲೇಜಿನ ಆವರಣದಲ್ಲಿ ಶಿವಸಂಚಾರ ತಂಡದಿಂದ ನಾಟಕೋತ್ಸವ ನಡೆಯಲಿವೆ.

28 ರಂದು ತುಲಾಭಾರ, 29 ರಂದು ಬಂಗಾರದ ಮನುಷ್ಯ, 30 ರಂದು ಕೋಳುರ ಕೊಡಗೂಸು ನಾಟಕಗಳ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮಕ್ಕೆ ಮಾಜಿ ಸಚಿವ ಅಮರೆಗೌಡ ಪಾಟೀಲ ಬಯ್ಯಪುರ ಚಾಲನೆ ನೀಡಲಿದ್ದಾರೆ. ಜಿಲ್ಲಾ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಮಸ್ಕಿ ಭಾಗಿಯಾಗುವರು ಎಂದು ತಿಳಿಸಿದರು.