ಸಂಡೂರು: ಪುರಸಭೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಕಚೇರಿಯಲ್ಲಿ ಶುಕ್ರವಾರ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು.
ಅನ್ನಪೂರ್ಣ ತುಕಾರಾಮ್ ಮಾತನಾಡಿ, ವಿರೋಧ ಪಕ್ಷದವರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಬೇಕು. ಸಂಸದ ತುಕಾರಾಮ್ ಅವರನ್ನು ನೋಡಿ ಕಲಿಯಬೇಕು. ಚುನಾವಣೆ ವೇಳೆ ಅಡ್ಡಿ ಪಡಿಸಿದವರನ್ನು ಸಹಿತ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ.ಲತಾ ಉಜ್ಜಪ್ಪ, ಮಾಜಿ ಅಧ್ಯಕ್ಷೆ ಆಶಾಲತಾ, ಮುಖ್ಯಾಧಿಕಾರಿ ಕೆ.ಜಯಣ್ಣ, ಸದಸ್ಯರಾದ ಅನಿತಾ ವಸಂತಕುಮಾರ್, ಎಲ್.ಎಚ್.ಶಿವಕುಮಾರ್, ಸಂತೋಷ್, ಹನುಮೇಶ್, ಅಶೋಕ್, ಬ್ರಹ್ಮಯ್ಯ, ಮುಖಂಡ ಯಾದಗರ್, ಅಧಿಕಾರಿಗಳಾದ ಹಗರಿ ಪ್ರಭುರಾಜ್, ಅರುಣ್ ಪಾಟೀಲ್, ಅನ್ನಪೂರ್ಣ, ಶಿವರಂಜಿನಿ ಇತರರಿದ್ದರು.