ಸಂಡೂರಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಸದಸ್ಯರಾದ ಸಿ.ಅಶೋಕ್, ಸಂತೋಷ್ ಕುಮಾರ್, ಬಳ್ಳಾರಿ ನಗರಾಭಿವೃದ್ಧಿ ಕೋಶದ ಇಇ ಶ್ರೀಕಂಠಸ್ವಾಮಿ, ಮುಖ್ಯಾಧಿಕಾರಿ ಕೆ.ಜಯಣ್ಣ ಇತರರಿದ್ದರು. 
ಜಿಲ್ಲೆ

ತ್ಯಾಜ್ಯ ಘಟಕ ಕಾಮಗಾರಿ ಬೇಗ ಮುಗಿಸಿ

ಸಂಡೂರು: ಪಟ್ಟಣದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪುರಸಭೆ ಅಧ್ಯಕ್ಷ ಎಸ್.ಸಿರಾಜ್, ಮುಖ್ಯಾಧಿಕಾರಿ ಕೆ.ಜಯಣ್ಣ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಎಸ್.ಸಿರಾಜ್ ಮಾತನಾಡಿ, ತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿ ಆರಂಭವಾಗಿ 10 ವರ್ಷವಾದರೂ ಮುಗಿಯದಿರುವುದು ಬೇಸರದ ಸಂಗತಿ. ಅನುದಾನ ಬೇಕಿದ್ದರೆ ಹೇಳಿ. ಸಂಸದರಿಗೆ ಕೇಳಿ ಮಂಜೂರಾತಿಗೆ ಕ್ರಮವಹಿಸಲಾಗುವುದು. ತಡಮಾಡದೆ ತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.

ಒಣ ಹಾಗೂ ಹಸಿ ಕಸ ಬೇರ್ಪಡಿಸುವ ಯಂತ್ರದ ಕುರಿತು ಮುಖ್ಯಾಧಿಕಾರಿ ಜಯಣ್ಣ ತಿಳಿಸಿದರು. ಪುರಸಭೆ ಸದಸ್ಯರಾದ ಸಿ.ಅಶೋಕ್, ಸಂತೋಷ್ ಕುಮಾರ್, ಬಳ್ಳಾರಿ ನಗರಾಭಿವೃದ್ಧಿ ಕೋಶದ ಇಇ ಶ್ರೀಕಂಠಸ್ವಾಮಿ, ಪುರಸಭೆ ಜೆಇ ಅರುಣ್ ಪಾಟೀಲ್, ಪರಿಸರ ಇಂಜಿನಿಯರ್ ಅನ್ನಪೂರ್ಣ, ಆರೋಗ್ಯ ನಿರೀಕ್ಷಕಿ ಶಿವರಂಜಿನಿ ಇತರರಿದ್ದರು.