ತೋರಣಗಲ್ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಬಿಎಚ್‌ಇಒ ಶಿವಪ್ಪ ಪ್ರತಿಜ್ಞಾವಿಧಿ ಬೋಧಿಸಿದರು. ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಕಂಕಣವಾಡಿ, ಕಾರ್ಯಕರ್ತೆಯರಾದ ಶಂಕ್ರಮ್ಮ, ತಿಮ್ಮಕ್ಕ, ಜಯಪ್ರದ, ಮಲ್ಲಮ್ಮ, ಪ್ರತಿಭಾ, ರುದ್ರಮ್ಮ, ಭಾಗ್ಯಮ್ಮ ಇತರರಿದ್ದರು. 
ಜಿಲ್ಲೆ

ಮಾನವ ಕಳ್ಳ ಸಾಗಣೆ ತಡೆಗೆ ಸಹಕರಿಸಿ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮನವಿ

ಸಂಡೂರು: ಮಾನವ ಕಳ್ಳ ಸಾಗಣೆ ಮಾಡುವುದು ದೇಶದ ಘನತೆಗೆ ಧಕ್ಕೆ ತರುವ ಕೃತ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅಭಿಪ್ರಾಯಪಟ್ಟರು.

ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ನಿಮಿತ್ತ ತೋರಣಗಲ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಬುಧವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಮತ್ತು ಮಕ್ಕಳು ಬಲಿ

ಮಾನವ ಕಳ್ಳ ಸಾಗಣೆ ದಂಧೆಗೆ ಬಹುತೇಕ ಮಹಿಳೆಯರು ಮತ್ತು ಮಕ್ಕಳು ಬಲಿಯಾಗುತ್ತಿದ್ದಾರೆ. ಲೈಂಗಿಕ ದೌರ್ಜನ್ಯ, ವೇಶ್ಯಾವೃತ್ತಿಗೆ ನೂಕುವುದು ಅಥವಾ ಜೀತ ಪದ್ಧತಿ, ಮಕ್ಕಳಿಂದ ಭಿಕ್ಷಾಟನೆ ಯಂತಹ ಕೃತ್ಯಗಳಿಗೆ ಬಳಸಲಾಗುತ್ತಿದೆ.

ಇದು ಮನುಕುಲಕ್ಕೆ ಅಗೌರವ ತರುವ ಸಂಗತಿ. ಪ್ರತಿಯೊಬ್ಬರೂ ಸ್ವತಂತ್ರವಾಗಿ ಗೌರವದಿಂದ ಬದುಕುವ ಹಕ್ಕಿದೆ. ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಮಾನವ ಕಳ್ಳ ಸಾಗಣೆ ಕಂಡುಬಂದರೆ ಸಹಾಯವಾಣಿ 1098 ಅಥವಾ 18883737888 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರೆ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಸಾಧ್ಯ ಎಂದರು.

ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಕಂಕಣವಾಡಿ ಮಾತನಾಡಿ, ಮಕ್ಕಳ ಮೇಲೆ ಪಾಲಕರು ನಿಗಾವಹಿಸಬೇಕು. ಅಂಗನವಾಡಿಗೆ ಬಿಡಲು ಮತ್ತು ಕರೆದೊಯ್ಯಲು ಪಾಲಕರು ಜೊತೆಗೆ ಬರಬೇಕು. ಅಪರಿಚಿತ ವ್ಯಕ್ತಿಗಳ ಬಗ್ಗೆ ಅನುಮಾನ ಬಂದರೆ ಪೊಲೀಸರಿಗೆ ತಿಳಿಸಬೇಕು ಎಂದರು.

ಗ್ರಾಮಸ್ಥರಾದ ರಾಜಶೇಖರ್, ಸಿದ್ದಯ್ಯಸ್ವಾಮಿ, ಕವಿತಾ, ಪಾರ್ವತಮ್ಮ, ಲಕ್ಷ್ಮೀ, ಜ್ಯೋತಿ ಅಕ್ಕಮಹಾದೇವಿ, ಕರೆಮ್ಮ, ಅಳ್ಳಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಶಂಕ್ರಮ್ಮ, ತಿಮ್ಮಕ್ಕ, ಜಯಪ್ರದ, ಮಲ್ಲಮ್ಮ, ಪ್ರತಿಭಾ, ರುದ್ರಮ್ಮ, ಭಾಗ್ಯಮ್ಮ, ಸ್ವಾತಿ, ಎರ‌್ರೆಮ್ಮ ಇತರರಿರಿದ್ದರು.