ಜಿಲ್ಲೆ

ತೋರಣಗಲ್ ರೈಲ್ವೆ ನಿಲ್ದಾಣ ಸಮೀಪ 3.77ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ

ಸಂಡೂರು: ತಾಲೂಕಿನ ತೋರಣಗಲ್ ರೈಲ್ವೆ ನಿಲ್ದಾಣ ಸಮೀಪ ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್ ನೇತೃತ್ವದ ತಂಡ ಶುಕ್ರವಾರ ವಶಕ್ಕೆ ಪಡೆದಿದೆ. ಲಾರಿಯಲ್ಲಿದ್ದ 3.77ಲಕ್ಷ ರೂ. ಮೌಲ್ಯದ 249.35ಕ್ವಿಂಟಾಲ್ ಅಕ್ಕಿಯನ್ನು ಸರ್ಕಾರಿ ಗೋದಾಮಿಗೆ ಸಾಗಿಸಲಾಗಿದೆ. ಕಂದಾಯ ನಿರೀಕ್ಷಕ ಪ್ರಭಾರ ಕೆ.ಮಂಜುನಾಥ, ಆಹಾರ ನಿರೀಕ್ಷಕ ಸೈಯದ್ ಸಿಕಂದರ್, ಗ್ರಾಮ ಲೆಕ್ಕಾಧಿಕಾರಿ ಅಬ್ದುಲ್ ನಿಯಾಜಿ ಕಾರ್ಯಾಚರಣೆಯಲ್ಲಿ ಇದ್ದರು.