ಜಿಲ್ಲೆ

ಜೀವನದ ಯಶಸ್ಸಿಗೆ ಶಿಕ್ಷಣವೊಂದೇ ಮಾರ್ಗ

ಕುರುವತ್ತಿ ಶ್ರೀಕಾಂತಪ್ಪ

ಸಂಡೂರು: ಯಾವ ಗ್ರಾಮದಲ್ಲಿ ದೇವಸ್ಥಾನದ ಗಂಟೆಗಿಂತ ಶಾಲೆಯ ಗಂಟೆ ಹೆಚ್ಚು ಸದ್ದು ಮಾಡುತ್ತದೆಯೋ, ಆ ಗ್ರಾಮ ಅಭಿವೃದ್ಧಿ ಹೊಂದುತ್ತದೆ ಎಂಬುದು ಡಾ.ಬಿ.ಆರ್.ಅಂಬೇಡ್ಕರ್ ನಂಬಿಕೆಯಾಗಿತ್ತು ಎಂದು ಶಾಸಕ ಈ.ತುಕಾರಾಮ್ ಹೇಳಿದರು.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಬನ್ನಿಹಟ್ಟಿ ಗ್ರಾಮದಲ್ಲಿ ನೂತನ ಪ್ರೌಢಶಾಲಾ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರತಿಯೊಂದು ಮಗುವೂ ಸೂಕ್ತ ಶಿಕ್ಷಣ ಪಡೆದಾಗ ಮಾತ್ರ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಯೊಂದು ಶಾಲೆಗೂ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಶ್ರಮಿಸುತ್ತಿದ್ದೇನೆ ಎಂದರು.

ದಾನಿಗಳಾದ ಕುರುಬರ ಮಲಿಯಮ್ಮ ರಾಮಪ್ಪ ಕುಟುಂಬದವರನ್ನು ಶಾಸಕರು ಸನ್ಮಾನಿಸಿದರು. ಎಸ್ಡಿಎಂಸಿ ಅಧ್ಯಕ್ಷ ರಾಮಾಂಜಿನಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ಶೇಕ್ ಅಹ್ಮದ್, ಬಿಇಒ ಮೈಲೇಶ್ ಬೇವೂರ್, ವಿಷಯ ಪರಿವೀಕ್ಷಕ ವೀರೇಶಪ್ಪ, ಡಯಟ್ ಉಪನ್ಯಾಸಕರಾದ ಚಂದ್ರಶೇಖರ್, ಷಣ್ಮುಖ ರಾವ್, ಪ್ರೇಮಾ, ಗ್ರಾಪಂ ಉಪಾಧ್ಯಕ್ಷೆ ಅಂಬಮ್ಮ, ಸದಸ್ಯರಾದ ಕುಮಾರಸ್ವಾಮಿ ದಿವಾಕರ್, ಗಂಡಪ್ಪ, ಶಾರದಮ್ಮ ರಾಮಪ್ಪ, ಎಸ್ಡಿಎಂಸಿ ಉಪಾಧ್ಯಕ್ಷೆ ಕಮಲಮ್ಮ ಹಾಜರಿದ್ದರು. ಶಿಕ್ಷಕಿ ಸುಜಾತಾ, ನಂದೀಶ್, ಮುಖ್ಯ ಶಿಕ್ಷಕಿ ವಾಣಿ ಪ್ರಾಸ್ತಾವಿಕ ನುಡಿದರು. ಕನ್ನಡ ಶಿಕ್ಷಕಿ ಕುಸುಮಾ ಹಿರೇಮಠ ವಂದಿಸಿದರು. ಶಿಕ್ಷಕರಾದ ಜಿ.ಎಂ.ಪ್ರದೀಪ್ ಕುಮಾರ್, ಶಿವಕುಮಾರ ಸ್ವಾಮಿ, ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.