ಸಂಡೂರು ತಾಲೂಕಿನ ಸಿದ್ದಾಪುರ ಬಳಿ ಇರಿಸಿದ್ದ ಬೋನಿಗೆ ಚಿರತೆ ಸೋಮವಾರ ಬೆಳಗಿನ ಜಾವ ಬಿದ್ದಿದೆ. 
ಜಿಲ್ಲೆ

ಬೋನಿಗೆ ಬಿದ್ದ ಚಿರತೆ

Ballari

ಸಂಡೂರು: ತಾಲೂಕಿನ ಸಿದ್ದಾಪುರ ಬಳಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಚಿರತೆ ಸೋಮವಾರ ಬೆಳಗಿನ ಜಾವ ಬಿದ್ದಿದೆ. ಆರ್‌ಎಫ್‌ಒ ಉಮೇಶ್, ಡಿಆರ್‌ಎಫ್‌ಒ ಶಿವಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಈ ವೇಳೆ ಮಾತನಾಡಿದ ಆರ್‌ಎಫ್‌ಒ ಉಮೇಶ್, ಕೆಲ ದಿನಗಳ ಹಿಂದಿನಿಂದ ಚಿರತೆಯೊಂದು ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ಮೂರು ದಿನಗಳ ಹಿಂದೆ ಆಯಕಟ್ಟಿನ ಸ್ಥಳದಲ್ಲಿ ಬೋನನ್ನು ಅಳವಡಿಸಲಾಗಿತ್ತು. ಇಂದು ಬೆಳಗಿನ ಜಾವ ಚಿರತೆ ಬೋನಿಗೆ ಬಿದ್ದಿದೆ. ಮೇಲಧಿಕಾರಿಗಳ ಆದೇಶ ಬಂದ ಬಳಿಕ ಸೆರೆ ಸಿಕ್ಕ ಚಿರತೆಯನ್ನು ಸೂಚಿತ ಅರಣ್ಯ ಪ್ರದೇಶದಲ್ಲಿ ಬಿಡಲಾಗುವುದು ಎಂದು ತಿಳಿಸಿದ್ದಾರೆ.