ಸಂಡೂರು ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಗೆ ಪೊಲೀಸ್ ರಕ್ಷಣೆ ಒದಗಿಸಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು. 
ಜಿಲ್ಲೆ

ತೋರಣಗಲ್ ಶಾಲಾ ಸಂಸತ್‌ಗೆ 20 ವಿದ್ಯಾರ್ಥಿಗಳು ಆಯ್ಕೆ

ಕುರುವತ್ತಿ ಶ್ರೀಕಾಂತಪ್ಪ

ಸಂಡೂರು: ತಾಲೂಕಿನ ತೋರಣಗಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮತದಾರರ ಸಾಕ್ಷರತಾ ಸಂಘದಿಂದ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಶಾಲಾ ಸಂಸತ್ ಚುನಾವಣೆ ಶನಿವಾರ ನಡೆಯಿತು.

20 ಸದಸ್ಯರ ಆಯ್ಕೆಗಾಗಿ ಚುನಾವಣಾ ಆಯೋಗದ ಮಾದರಿಯಲ್ಲೇ 20 ಕ್ಷೇತ್ರಗಳನ್ನು ರಚಿಸಿ 30 ಟ್ಯಾಬ್‌ಗಳಲ್ಲಿ ಬ್ಯಾಲೆಟ್ ಮಷಿನ್, ಕಂಟ್ರೋಲ್ ಯೂನಿಟ್‌ಗಳನ್ನು ಇನ್‌ಸ್ಟಾಲ್ ಮಾಡಿ ಮತಯಂತ್ರದ ಮೂಲಕ ಚುನಾವಣೆ ನಡೆಸಲಾಯಿತು. ಕಣದಲ್ಲಿದ್ದ 45 ವಿದ್ಯಾರ್ಥಿ ಅಭ್ಯರ್ಥಿಗಳಲ್ಲಿ 20 ಮಂದಿ ಚುನಾವಣೆ ಮೂಲಕ ಆಯ್ಕೆಯಾದರು.

ಶಾಲೆಯ ಮುಖ್ಯಶಿಕ್ಷಕ ಚುನಾವಣಾ ಆಯುಕ್ತರಾಗಿ, ತರಗತಿ ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. 55 ವಿದ್ಯಾರ್ಥಿಗಳು ಪಿಆರ್‌ಒ, ಎಪಿಆರ್‌ಒ, ಪೋಲಿಂಗ್ ಹಾಗೂ ಪೊಲೀಸ್ ಆಫೀಸರ್‌ಗಳಾಗಿ ಕರ್ತವ್ಯ ನಿರ್ವಹಿಸಿದರು.

ಪ್ರಭಾರ ಮುಖ್ಯಶಿಕ್ಷಕಿ ಅನೀಸ್ ಫಾತಿಮಾ, ಶಿಕ್ಷಕರಾದ ಯರ‌್ರಿಸ್ವಾಮಿ, ಶಶಿಕಲಾ, ಸಾವಿತ್ರಿ, ಸ್ನೇಹಲತಾ, ಸರೋಜಾ, ಶಾಂತಲಾ, ಈರಣ್ಣ, ಜಬೀವುಲ್ಲಾ, ದೊಡ್ಡಬಸವ, ವಿಜಯಕುಮಾರ್, ಸುಹಾಸ್ ನಾಯಕ್, ವಿದ್ಯಾರ್ಥಿಗಳಾದ ಪ್ರಿಯಾ, ಚೈತ್ರಾ, ಸ್ನೇಹ್ನಾ, ಸಮೃತಾ, ಅರವಿಂದರೆಡ್ಡಿ, ಸಂಜಯ್, ಸುಶ್ಮಿತಾ, ಪೂರ್ಣಶ್ರೀ ಹಾಜರಿದ್ದರು.