ಸಂಡೂರಿನ ಕುರುಮಟ್ಟಿ ರುದ್ರಭೂಮಿಯಲ್ಲಿ ಜೆಸಿಬಿಯಿಂದ ಗಿಡಗಂಟಿ ತೆರವುಗೊಳಿಸಲಾಯಿತು.  
ಜಿಲ್ಲೆ

ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯ

ನರೇಶ್ ಕುಮಾರ್

ಸಂಡೂರು: ಪಟ್ಟಣದ ಕುರುಮಟ್ಟಿ ಹತ್ತಿರವಿರುವ ರುದ್ರಭೂಮಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಸೋಮವಾರ ಪುರಸಭೆ ಜೆಸಿಬಿ ಮೂಲಕ ತೆರವುಗೊಳಿಸಿತು.

ಮುಳ್ಳಿನ ಗಿಡಗಂಟಿಗಳು ಬೆಳೆದು ತೆರಳಲು ಆಗುತ್ತಿರಲಿಲ್ಲ. ಹೀಗಾಗಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಇಲ್ಲಿನ ನೀರಿನ ಟ್ಯಾಂಕರ್ ಸಹ ಸ್ವಚ್ಛಗೊಳಿಸಲಾಯಿತು.

ಒಂದು ಮತ್ತು 14ನೇ ವಾರ್ಡ್ ಪಾರ್ಕ್‌ಗಳಲ್ಲಿ ಸಸಿಗಳನ್ನು ನೆಡಲಾಯಿತು ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಜಯಣ್ಣ ತಿಳಿಸಿದರು. ಪರಿಸರ ಇಂಜಿನಿಯರ್ ಅನ್ನಪೂರ್ಣ, ಶಿವರಂಜಿನಿ ಇತರರಿದ್ದರು.