ಸಂಡೂರು ತಾಲೂಕಿನ ಕುರೇಕುಪ್ಪದಲ್ಲಿ ಕ್ರಾಂತಿಕಾರಿ ಭಗತ್‌ಸಿಂಗ್ 118ನೇ ಜನ್ಮದಿನ ಶನಿವಾರ ಆಚರಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ವಿ.ದೇವಣ್ಣ, ಕುರೇಕುಪ್ಪ ಪುರಸಭೆ ಅಧ್ಯಕ್ಷ ಕೆ.ಕಲ್ಗುಡೆಪ್ಪ, ಕೆಪಿಆರ್‌ಎಸ್ ತಾಲೂಕು ಅಧ್ಯಕ್ಷ ಜಿ.ಪಂಪನಗೌಡ, ಎನ್.ದೇವಣ್ಣ ಇತರರಿದ್ದರು. 
ಜಿಲ್ಲೆ

ಪ್ರತಿಯೊಬ್ಬರಿಗೂ ಕ್ರಾಂತಿಕಾರಿ ಭಗತ್ ಸಿಂಗ್ ಹೋರಾಟ ಆದರ್ಶ

ಸಂಡೂರು: ಕ್ರಾಂತಿಕಾರಿ ಭಗತ್‌ಸಿಂಗ್ ಅವರ ಆದರ್ಶಗಳನ್ನು ಅಳವಡಿಸಿ ಕೊಳ್ಳಬೇಕು ಎಂದು ಕಟ್ಟಡ ಕಾರ್ಮಿಕರ ಫೆಡರೇಷನ್ ತಾಲೂಕು ಅಧ್ಯಕ್ಷ ವಿ.ದೇವಣ್ಣ ಹೇಳಿದರು.

ತಾಲೂಕಿನ ಕುರೇಕುಪ್ಪದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಹಮ್ಮಿಕೊಂಡಿದ್ದ ಕ್ರಾಂತಿಕಾರಿ ಭಗತ್‌ಸಿಂಗ್ 118ನೇ ಜನ್ಮದಿನಾಚರಣೆಯಲ್ಲಿ ಶನಿವಾರ ಮಾತನಾಡಿದರು. ದೇಶಕ್ಕೆ ಸ್ವಾತಂತ್ರೃ ಸಿಕ್ಕರೆ ಸಾಲದು. ಸಮಾಜವಾದಿ ಭಾರತ ನಿರ್ಮಾಣವಾಗಬೇಕು ಎಂಬ ಕನಸನ್ನು ಭಗತ್ ಸಿಂಗ್ ಕಂಡಿದ್ದರು. ಇದಕ್ಕೆ ಹೆದರಿದ ಬ್ರಿಟಿಷರು ಅವರನ್ನು 23ನೇ ವಯಸ್ಸಿಗೆ ಗಲ್ಲಿಗೇರಿಸಿದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರ ಧೈರ್ಯ ಹೋರಾಟ ಎಲ್ಲರಿಗೂ ಆದರ್ಶ ಎಂದರು. ಕುರೇಕುಪ್ಪ ಪುರಸಭೆ ಅಧ್ಯಕ್ಷ ಕೆ.ಕಲ್ಗುಡೆಪ್ಪ, ಕೆಪಿಆರ್‌ಎಸ್ ತಾಲೂಕು ಅಧ್ಯಕ್ಷ ಜಿ.ಪಂಪನಗೌಡ, ಎನ್. ದೇವಣ್ಣ ಮಾತನಾಡಿದರು.

ಕಟ್ಟಡ ಕಾರ್ಮಿಕ ಸಂಘಟನೆ ಜಿಲ್ಲಾ ಮುಖಂಡ ಕೆ.ದೇವಣ್ಣ, ಗ್ರಾಮ ಘಟಕದ ಅಧ್ಯಕ್ಷ ಕೆ.ಸತ್ಯಣ್ಣ, ಕಾರ್ಯದರ್ಶಿ ಹಾಲಸ್ವಾಮಿ, ಪ್ರಮುಖರಾದ ಕೆ.ಹೊನ್ನೂರಪ್ಪ, ಎನ್.ಹುಲಿಯಪ್ಪ, ಕೆ.ಹಾಲಸ್ವಾಮಿ, ಎಚ್.ಸಣ್ಣಸ್ವಾಮಿ, ಕೆ.ಶರಣಬಸವ, ಕೆ.ಬಸವರಾಜ್, ಎನ್.ವೀರೇಶಪ್ಪ, ಶಿವಾರೆಡ್ಡಿ, ಗಾದಿಲಿಂಗಪ್ಪ ಇತರರಿದ್ದರು.