ಜಿಲ್ಲೆ

ಮಳೆ ಮಾಪನ ಕೇಂದ್ರ ಸ್ಥಳಾಂತರಿಸಿ

Ballari

ಸಂಡೂರು: ತಾಲೂಕಿನ ಚೋರನೂರು ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಮಳೆ ಮಾಪನ ಕೇಂದ್ರವನ್ನು ಸ್ಥಳಾಂತರಿಸುವ ಕುರಿತು ಡಿ.3ರಂದು ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಅಧಿಕಾರಿಗಳ ಕಚೇರಿಯಿಂದ ಪತ್ರ ಬರೆಯಲಾಗಿದೆ.

ಪ್ರಾಆಕೇಂದ್ರದಲ್ಲಿರುವ ಮಳೆ ಮಾಪನ ಕೇಂದ್ರದ ಬೋರ್ಡ್ ತುಕ್ಕು ಹಿಡಿದಿದೆ. ಫೆನ್ಸಿಂಗ್ ಮುರಿದು ಬಿದ್ದಿದೆ. ಇಲ್ಲಿನ ಮಳೆ ಮಾಪನ ಕೇಂದ್ರವನ್ನು ಯಾರು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ, ಇದರ ಜತೆ ಆಸ್ಪತ್ರೆ ಮೇಲ್ದರ್ಜೆಗೇರಿಸುತ್ತಿರುವ ಕಾರಣ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸ್ಥಳೀಯ ವೈದ್ಯರು ತಿಳಿಸಿದ್ದಾರೆ.

ಚೋರನೂರು ಪ್ರಾಆಕೇಂದ್ರದಲ್ಲಿನ ಮಳೆ ಮಾಪನ ಕೇಂದ್ರವು ಯಾರ ಕಾಲದಲ್ಲಿ ಆರಂಭವಾಗಿತ್ತೊ ತಿಳಿಯದು. ಇದೀಗ ಪ್ರಾಆಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಗೆರಿಸಲಾಗುತ್ತಿದ್ದು, ಅದಕ್ಕಾಗಿ ಸ್ಥಳಾಂತರಿಸುವಂತೆ ತಹಸೀಲ್ದಾರ್‌ಗೆ ಪತ್ರ ಬರೆಯಲಾಗಿದೆ.| ಡಾ.ಅಕ್ಷಯಕುಮಾರ್ ಚೋರುನೂರು ಪ್ರಾಆಕೇಂದ್ರ ವೈದ್ಯ