ಸಂಡೂರಿನಲ್ಲಿ ಉಪ ಚುನಾವಣೆ ಪ್ರಯುಕ್ತ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚುನಾವಣಾಧಿಕಾರಿ ಎಚ್.ಡಿ.ರಾಜೇಶ್ ಚಾಲನೆ ನೀಡಿದರು. ಸ್ವೀಪ್ ಸಮಿತಿ ಅಧ್ಯಕ್ಷ ಎಚ್.ಷಡಕ್ಷರಯ್ಯ, ಸಹಾಯಕ ಚುನಾವಣಾಧಿಕಾರಿ ಅನಿಲ್ ಕುಮಾರ್ ಇತರರಿದ್ದರು. 
ಜಿಲ್ಲೆ

ಅಮೂಲ್ಯವಾದ ಮತ ಮಾರಿಕೊಳ್ಳದಿರಿ

ಸಂಡೂರು: ವಿಧಾನಸಭೆ ಉಪ ಚುನಾವಣೆ ಪ್ರಯುಕ್ತ ಕ್ಷೇತ್ರ ವ್ಯಾಪ್ತಿಯ ಸಂಡೂರು, ಕುರೇಕುಪ್ಪ, ಕುಡತಿನಿ ಪುರಸಭೆ-ಪಟ್ಟಣ ಪಂಚಾಯಿತಿ ಹಾಗೂ 27 ಗ್ರಾಮ ಪಂಚಾಯತಿಗಳಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚುನಾವಣಾಧಿಕಾರಿ ಎಚ್.ಡಿ.ರಾಜೇಶ್ ಚಾಲನೆ ನೀಡಿದರು.

ಚುನಾವಣಾಧಿಕಾರಿ ರಾಜೇಶ್ ಮಾತನಾಡಿ, ಅ.23ರಿಂದ ನ.12ರವರೆಗೆ ವಿವಿಧ ಸ್ವೀಪ್ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿ ಮತದಾನದ ಪ್ರಮಾಣ ಹೆಚ್ಚಿಸಲು ಕ್ರಮವಹಿಸಲಾಗುವುದು. ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗಿ ಅಮೂಲ್ಯವಾದ ಮತವನ್ನು ಮಾರಿಕೊಳ್ಳಬಾರದು. ಉತ್ತಮ ಅಭ್ಯರ್ಥಿ ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯಬೇಕು ಎಂದರು.

ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಎಚ್.ಷಡಕ್ಷರಯ್ಯ, ಸಹಾಯಕ ಚುನಾವಣಾಧಿಕಾರಿ ಅನಿಲ್ ಕುಮಾರ್, ಪುರಸಭೆ ಮುಖ್ಯ ಅಧಿಕಾರಿ ಕೆ.ಜಯಣ್ಣ, ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ ಇತರರಿದ್ದರು.