ಸಂಡೂರು ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವನ್ನು ಕೆಂದ್ರದ ನಿರ್ದೇಶಕ ಡಾ.ಬಿ.ರವಿ ಉದ್ಘಾಟಿಸಿದರು. ಪ್ರಭುಸ್ವಾಮೀಜಿ, ಕಾರ್ಯಕ್ರಮಾಧಿಕಾರಿ ಡಾ.ಕೆ.ಜಿ.ಸುಮಾ ಇತರರಿದ್ದರು. 
ಜಿಲ್ಲೆ

ನಂದಿಹಳ್ಳಿ ಬಳ್ಳಾರಿಯ ಶಿಕ್ಷಣ ಕಾಶಿ

ಸಂಡೂರು: ವಿದ್ಯಾರ್ಥಿ ಜೀವನದಲ್ಲಿ ಕಲಿಕೆಗೆ ಇರುವ ಹಲವಾರು ಮಾರ್ಗಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಬಹಳ ಶೇಷ್ಠ ಹಾಗೂ ಪರಿಣಾಮಕಾರಿಯಾಗಿದೆ ಎಂದು ವಿರಕ್ತಮಠದ ಪ್ರಭು ಸ್ವಾಮೀಜಿ ಹೇಳಿದರು.

ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಾನ್ನಿಧ್ಯ ವಹಿಸಿ ಮಂಗಳವಾರ ಮಾತನಾಡಿದರು. ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ ಬಳ್ಳಾರಿಯ ಶಿಕ್ಷಣ ಕಾಶಿ ಎಂದು ಬಣ್ಣಿಸಿದರು.
ಪ್ರೊ.ಸದ್ಯೋಜಾತಪ್ಪ ಮಾತನಾಡಿ, ಇಂದಿನ ತಂತ್ರಜ್ಣಾನದ ಯುಗದಲ್ಲಿ ವಿದ್ಯಾರ್ಥಿಗಳು ಕೌಶಲ ಅರಿತು ಅವುಗಳನ್ನು ಅಳವಡಿಸುವತ್ತ ಚಿತ್ತ ಹರಿಸಬೇಕೆಂದು ತಿಳಿಸಿದರು.

ಉಪನ್ಯಾಸಕ ಡಾ.ಚೌಡಪ್ಪ ಮಾತನಾಡಿ, ಶಿಬಿರದಲ್ಲಿ ಏಳು ದಿನ ನಂದಿಹಳ್ಳಿ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಸಂಡೂರಿನಲ್ಲಿ ಡೆಂೆ ಮತ್ತು ಮಲೇರಿಯಾ ಜಾಥಾ, ಸ್ವಚ್ಛತಾ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೇಂದ್ರದ ನಿರ್ದೇಶಕ ಡಾ.ಬಿ.ರವಿ, ಕಾರ್ಯಕ್ರಮಾಧಿಕಾರಿ ಡಾ.ಕೆ.ಜಿ.ಸುಮಾ, ಡಾ.ಪಿ.ಶರತಕುಮಾರ, ಡಾ.ಶಶಿಧರ, ಉಪನ್ಯಾಸಕರಾದ ಲಕ್ಷ್ಮಣ ತೋಳಿ, ಡಾ.ನಾಗರಾಜ ಇದ್ದರು.