ಜಿಲ್ಲೆ

ಬಾಯಿ, ವಸಡು, ಹಲ್ಲುಗಳ ಶುಚಿ ಅಗತ್ಯ

ಸಂಡೂರು: ಬಾಯಿ, ವಸಡು, ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ರೋಗಮುಕ್ತ ಜೀವನ ನಡೆಸಬಹುದು ಎಂದು ಸಂಡೂರಿನ ಹಿರಿಯ ದಂತ ವೈದ್ಯೆ ಡಾ.ಕಲಾವತಿ ಹೇಳಿದರು.

ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ವಿಶ್ವಬಾಯಿ ಆರೋಗ್ಯ ದಿನಾಚರಣೆ ಕುರಿತು ಶುಕ್ರವಾರ ಮಾತನಾಡಿದರು. ನಿತ್ಯ ಎರಡು ಹೊತ್ತು ಬ್ರೆಷ್ ಮಾಡಬೇಕು. ಪ್ರತಿದಿನ ಬೆಳಗ್ಗೆ ಪೇಸ್ಟ್ ಮಾಡುವ ಹಲ್ಲುಗಳ ಜತೆ ವಸಡುಗಳನ್ನು ಶುಚಿಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಸೀನಿಯರ್ ಡೆಂಟಿಸ್ಟ್ ಡಾ.ಅಫ್ರೋಜ್ ಬಾನು ಮಾತನಾಡಿ, ತಂಬಾಕು, ಗುಟ್ಖಾ, ಸಿಗರೇಟು ಸೇದುವುದರಿಂದ ಬಾಯಿ ದುರ್ವಾಸನೆ ಜತೆಗೆ ಕ್ಯಾನ್ಸರ್ ಬರುತ್ತದೆ ಎಂದರು.

ಬಳ್ಳಾರಿಯ ಆಯುಷ್ ಇಲಾಖೆ ಡಾ.ಜಮೀರ್ ಅಹ್ಮದ್‌ಖಾನ್, ಕೇಂದ್ರದ ನಿರ್ದೇಶಕರಾದ ಡಾ.ರವಿ, ಸಂಯೋಜಕಿ ಸುಮಾ ಮುಂತಾದವರಿದ್ದರು. 310 ವಿದ್ಯಾರ್ಥಿಗಳು ಬಾಯಿ ಪರೀಕ್ಷೆಗೊಳಗಾದರು.