ಸಂಡೂರು: ನಾರೀಹಳ್ಳ ಜಲಾಶಯದ ಬಳಿ ಮಂಗಳವಾರ ಎರಡು ಅದಿರು ಲಾರಿಗಳ ನಡುವೆ ಡಿಕ್ಕಿಯಾಗಿದ್ದರಿಂದ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ತೊಮದರೆ ಅನುಭವಿಸಿದರು.
112 ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಲೋಡರ್ ಮೂಲಕ ಲಾರಿಗಳನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಎರಡೂ ಲಾರಿ ಚಾಲಕರು ಮತ್ತು ಸಹಾಯಕರು ಸ್ಥಳದಿಂದ ಪರಾರಿಯಾಗಿದ್ದು, ಸುಶೀಲಾನಗರ ಮತ್ತು ಬಳ್ಳಾರಿಯ ನಿವಾಸಿಗಳ ಲಾರಿಗಳೆಂದು ತಿಳಿದು ಬಂದಿದೆ.
ಮಾಲೀಕರ ಮಾಹಿತಿ ದೊರೆತ ನಂತರ ಕ್ರಮವಹಿಸಲಾಗುವುದು ಎಂದು ಸಂಡೂರು ಪಿಎಸ್‌ಐ ವೀರೇಶ್ ಮಾಳಶೆಟ್ಟಿ ತಿಳಿಸಿದ್ದಾರೆ.