ಸಂಡೂರಿನ ಶ್ರೀ ಕುಮಾರಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದಾಮೋದರ ಮಾಸದ ನಿಮಿತ್ತ ದಶ ಸಹಸ್ರ ದೀಪೋತ್ಸವ ಕಾರ್ಯಕ್ರಮ ಜರುಗಿತು. ಸ್ಮಯೋರ್ ಸಂಸ್ಥೆ ಎಂ.ಡಿ.ಬಹಿರ್ಜಿ ಘೋರ್ಪಡೆ, ಸಹೋದರ ಏಕಾಂಬರ್ ಅಜಯ್ ಘೋರ್ಪಡೆ ಇದ್ದರು. 
ಜಿಲ್ಲೆ

ಕಾರ್ತಿಕ ದೀಪೋತ್ಸವ ಅದ್ದೂರಿ

ಸಂಡೂರು: ಕಾರ್ತಿಕ ಮಾಸದ ನಿಮಿತ್ತ ಕುಮಾರಸ್ವಾಮಿ ದೇವಸ್ಥಾನದಲ್ಲಿ ದಶ ಸಹಸ್ರ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಸೋಮವಾರ ಜರುಗಿತು.

ಸಂಡೂರು, ಹೊಸಪೇಟೆ, ಬಳ್ಳಾರಿ, ದೇವಗಿರಿ, ಸುಬ್ರಾಯನಹಳ್ಳಿ, ಕಮ್ಮತ್ತೂರು, ತುಂಬರಗುದ್ದಿ, ನಂದಿಹಳ್ಳಿ, ಬೊಮ್ಮಘಟ್ಟ, ಚೋರನೂರು, ಅಂಕಮನಾಳ್ ಸೇರಿ ವಿವಿಧ ಗ್ರಾಮಗಳಿಂದ ಬಂದ ಸಾವಿರಾರು ಭಕ್ತರು ದೀಪ ಹಚ್ಚಿ ಭಕ್ತಿ ಸಮರ್ಪಿಸಿದರು.

ಸ್ಮಯೋರ್ ಸಂಸ್ಥೆ ಎಂ.ಡಿ.ಬಹಿರ್ಜಿ ಘೋರ್ಪಡೆ, ಸಹೋದರ ಏಕಾಂಬರ್ ಘೋರ್ಪಡೆ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸ್ಮಯೋರ್ ಕಂಪನಿ ಚೇರ್‌ಮೆನ್ ಟಿ.ಆರ್.ರಘುನಂದನ್, ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಪ್ರಾಣೇಶ್ ಆಚಾರ್, ಕಂಪನಿ ಅಧಿಕಾರಿ ವೆಂಕಟೇಶ್ವರರಾವ್, ಪ್ರಮುಖರಾದ ಸೂರ್ಯನಾರಾಯಣ ಭಟ್ಟರು, ಹರಿಹರ ಭಟ್ಟರು ಇತರರಿದ್ದರು.