ಸಂಡೂರು: ಕಾರ್ಗಿಲ್ ಹೋರಾಟ ಭಾರತೀಯರಿಗೆ ಅವಿಸ್ಮರಣೀಯ ದಿನವೆಂದು ನಿವೃತ್ತ ಸೈನಿಕ ನಾಗರಾಜ್ ಹೇಳಿದರು.
ಕೃಷ್ಣಾನಗರ ಬಳಿಯ ಬಿಕೆಜಿ ಸಮೂಹ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾತನಾಡಿದರು. ಜಮ್ಮು-ಕಾಶ್ಮೀರದ ಥರಗುಟ್ಟುವ ಚಳಿಯಲ್ಲಿ ಯುದ್ಧವೆಂದರೆ ಸುಮ್ಮನಲ್ಲ. ಪಾಕಿಸ್ತಾನ ಸೈನಿಕರು ಮೋಸದಿಂದ ದಾಳಿ ಮಾಡುತ್ತಿದ್ದರು. ಆದರೂ ಭಾರತೀಯ ವೀರಯೋಧರು ಹೊಡೆದೋಡಿಸಿ ಯುದ್ಧ ಗೆದ್ದರು ಎಂದರು.
ಇದನ್ನೂ ಓದಿ: ಕಾರ್ಗಿಲ್ ವಿಜಯ ದಿವಸ
ಬಿಕೆಜಿ ಕಾಲೇಜಿನ ಪ್ರಾಚಾರ್ಯ ಕೆ.ಮೋಹನರಾವ್, ಶಾಲೆಯ ಪ್ರಾಚಾರ್ಯೆ ಶೋಭಾ ಮಿಶ್ರಾ ಇತರರಿದ್ದರು.