ಸಂಡೂರು ತಾಲೂಕು ಮೆಟ್ರಿಕಿ ಗ್ರಾಪಂ ವ್ಯಾಪ್ತಿಯಲ್ಲಿ ವೈಯಕ್ತಿತ ಕಾಮಗಾರಿಯನ್ನು ಜಿಪಂ ಉಪ ಕಾರ್ಯದರ್ಶಿ ಗಿರಿಜಾಶಂಕರ್ ಪರಿಶೀಲಿಸಿದರು. ತಾಪಂ ಇಒ ಎಚ್.ಷಡಕ್ಷರಯ್ಯ, ಜಿಲ್ಲಾ ಐಇಸಿ ಸಂಯೋಜಕ ನಟರಾಜ, ಪಿಡಿಒ ಹನುಮಂತ ಆರ್.ಮಾಗಿ ಇತರರಿದ್ದರು. 
ಜಿಲ್ಲೆ

ಮೆಟ್ರಿಕಿಯಲ್ಲಿ ನರೇಗಾ ಕಾಮಗಾರಿ ಪರಿಶೀಲನೆ

ನರೇಶ್ ಕುಮಾರ್

ಸಂಡೂರು: ತಾಲೂಕಿನ ಮೆಟ್ರಿಕಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಸ್ಥಳಕ್ಕೆ ಜಿಪಂ ಉಪ ಕಾರ್ಯದರ್ಶಿ ಗಿರಿಜಾಶಂಕರ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ನಮೂನೆ 6 ರಲ್ಲಿ ಅರ್ಜಿ ಸಲ್ಲಿಸಿದ ಕೂಲಿಕಾರರ ಮಾಹಿತಿ ರಿಜಿಸ್ಟರ್ 3ರಲ್ಲಿ ದಾಖಲಿಸುವುದು, ಜಾಬ್‌ಕಾರ್ಡ್, ಕೂಲಿಕಾರರಿಗೆ ಕೂಲಿ ಮತ್ತು ಅಳತೆ, ವೈಯಕ್ತಿಕ ಕಾಮಗಾರಿಗಳ ಪಟ್ಟಿ, ನಾಮಫಲಕದಲ್ಲಿ ಪೂರ್ಣವಾಗಿ ಮಾಹಿತಿ ಬರೆಸುವುದು, 2023-24ನೇ ಸಾಲಿನ ಕಾಮಗಾರಿಗಳ ಕಡತಗಳನ್ನು ಅಪ್ಡೇಟ್ ಮಾಡಿಸಲು ಸೂಚಿಸಿದರು.

ಲಕ್ಕಲಹಳ್ಳಿ ಗ್ರಾಮದ ಅಮೃತ ಸರೋವರ ಅಡಿ ನಲ್ಲೋಬಯ್ಯ ಕೆರೆ, ತುರಾಯೂ ಗುಂಡ್ಲು ಕೆರೆ ಅಭಿವೃದ್ಧಿ, ಬಸಾಪುರ ಗ್ರಾಮದ ವೈಯಕ್ತಿಕ ಮತ್ತು ಪಪ್ಪಾಯ ತೋಟ ಕಾಮಗಾರಿ ಸ್ಥಳ ಮತ್ತು ಕಡತಗಳನ್ನು ಪರಿಶೀಲನೆ ಮಾಡಿದರು.