ಸಂಡೂರಿನ ಸಿಡಿಪಿಒ ಪಿ.ನಾಗರಾಜಗೆ ವಿಮುಕ್ತ ದೇವದಾಸಿಯರ ಸಂಘದ ಪದಾಧಿಕಾರಿಗಳು ಮನವಿ ಪತ್ರವನ್ನು ಸಲ್ಲಿಸಿದರು. ಸಂಘಟನೆಯ ತಾಲೂಕಾಧ್ಯಕ್ಷೆ ನಾಗಮ್ಮ, ಪ್ರಧಾನ ಕಾರ್ಯದರ್ಶಿ ಎಚ್.ದುರುಗಮ್ಮ, ಕಾರ್ಯದರ್ಶಿ ಹುಲಿಗಮ್ಮ, ಪ್ರಮುಖರಾದ ಮಾರೆಮ್ಮ, ಅಂಜಿನಮ್ಮ, ಕೊಟ್ರಮ್ಮ, ಮಲ್ಲಮ್ಮ ಇತರರಿದ್ದರು.  
ಜಿಲ್ಲೆ

ಗಣತಿ ಕಾರ್ಯ ಸಮರ್ಪಕವಾಗಿ ಮಾಡಿ

ಪ್ರವೀಣ ಉದುಸಾ ದಲಬಂಜನ್

ಸಂಡೂರು: ಹೊರಗುಳಿದ ವಿಮುಕ್ತ ದೇವದಾಸಿ ಹಾಗೂ ಕುಟುಂಬದ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸಲು ಒತ್ತಾಯಿಸಿ ವಿಮುಕ್ತ ದೇವದಾಸಿ ಸಂಘದ ಸದಸ್ಯರು ಪಟ್ಟಣದ ಸಿಡಿಪಿಒ ಪಿ.ನಾಗರಾಜಗೆ ಗುರವಾರ ಮನವಿ ಪತ್ರ ಸಲ್ಲಿಸಿದರು.

ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ದುರುಗಮ್ಮ ಮಾತನಾಡಿ, ನಿರಂತರ ಹೋರಾಟ ಫಲವಾಗಿ ಸರ್ಕಾರ ದೇವದಾಸಿ ನಿಷೇಧ ಮಸೂದೆ-2025ನ್ನು ಅಂಗೀಕರಿಸಿ ಗಣತಿ ಪಟ್ಟಿಯಿಂದ ಹೊರಗುಳಿದ ವಿಮುಕ್ತ ದೇವದಾಸಿ ಹಾಗೂ ಕುಟುಂಬ ಸದಸ್ಯರನ್ನು ಸೇರಿಸುವಂತೆ ಆದೇಶಿಸಿದೆ. ಆದರೆ ಗಣತಿ ಪಟ್ಟಿ ಸೇರಿಸುವ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ದೇವದಾಸಿ ನಿಷೇದ ಕಾಯ್ದೆ-1982ನ್ನು ತೋರಿಸಿ ಕಾಯಿದೆ ನಂತರ ಹುಟ್ಟಿದವನ್ನು ಗಣತಿಯಲ್ಲಿ ಸೇರಿಸಲಾಗದು ಎಂದು ಹೇಳಲಾಗುತ್ತಿದೆ. ಹೀಗಾಗಿ ಸರ್ಕಾರದ ವಿವಿಧ ಸೌಲಭ್ಯಗಳಿಂದ ಹಲವರು ವಂಚಿತರಾಗಲಿದ್ದಾರೆ. ಕೂಡಲೇ ಗಣತಿ ಪಟ್ಟಿಗೆ ಸೇರಿಸುವ ಕಾರ್ಯವಾಗಲಿ ಎಂದು ಒತ್ತಾಯಿಸಿದರು.