ಸಂಡೂರಿನ ತಾಲೂಕು ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಶಾಸಕ ಈ.ತುಕಾರಾಮ್ ಮಾತನಾಡಿದರು. ತಹಸೀಲ್ದಾರ್ ಜಿ.ಅನಿಲ್ ಕುಮಾರ್, ತಾಪಂ ಇಒ ಎಸ್.ಷಡಕ್ಷರಯ್ಯ, ಎಸ್ಟಿ ಕಲ್ಯಾಣಾಧಿಕಾರಿ ರವಿಕುಮಾರ್, ಪ್ರಮುಖರಾದ ನವಲಟ್ಟಿ ಜಯಣ್ಣ, ಡಿ.ಕೃಷ್ಣಪ್ಪ, ಉಪಾಧ್ಯಕ್ಷ ವದ್ದಟ್ಟಿ ಆಂಬರೀಷ್ ಇತರರಿದ್ದರು. 
ಜಿಲ್ಲೆ

ಮೊದಲು ವೇದಿಕೆ ಕಾರ್ಯಕ್ರಮ ನಡೆಸಿ

ನರೇಶ್ ಕುಮಾರ್

ಸಂಡೂರು: ಈ ಬಾರಿ ಬರಗಾಲ ಇರುವುದರಿಂದ ಮಹರ್ಷಿ ವಾಲ್ಮೀಕಿ ಜಯಂತಿಯ ಮೆರವಣಿಗೆ ವೇಳೆ ಡಿಜೆ ಬದಲಿಗೆ ಡೊಳ್ಳು, ಕೋಲಾಟ, ವೀರಗಾಸೆ, ಹಗಲುವೇಷ ಕಲಾವಿದರನ್ನು ಕರೆಸಬೇಕು. ಮೊದಲು ವೇದಿಕೆ ಕಾರ್ಯಕ್ರಮ ನಡೆಸಿದ ನಂತರ ಮೆರವಣಿಗೆ ಮಾಡಿ ಎಂದು ಅಧಿಕಾರಿಗಳಿಗೆ ಶಾಸಕ ಈ.ತುಕಾರಾಮ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ವಾಲ್ಮೀಕಿ ಬೆಳಕು ಪ್ರಶಸ್ತಿಗೆ ರಾಜಕೀಯ ಹಿನ್ನೆಲೆ ಹೊಂದಿರದವರನ್ನು ಆಯ್ಕೆ ಮಾಡಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ, ಫಾರಿನ್ ಎಜುಕೇಷನ್ ಮಾಡಿರುವ ಒಬ್ಬರಿಗೆ ಪ್ರಶಸ್ತಿ ನೀಡಲಾಗುವುದು. ಕೆಎಎಸ್‌ಗೆ ಆಯ್ಕೆಯಾದವರನ್ನು ಸನ್ಮಾನಿಸಲಾಗುವುದು ಎಂದರು.

ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ನವಲಟ್ಟಿ ಜಯಣ್ಣ, ತಹಸೀಲ್ದಾರ್ ಜಿ.ಅನಿಲ್ ಕುಮಾರ್, ತಾಪಂ ಇಒ ಎಸ್.ಷಡಕ್ಷರಯ್ಯ, ಎಸ್ಟಿ ಕಲ್ಯಾಣಾಧಿಕಾರಿ ರವಿಕುಮಾರ್ ಮಾತನಾಡಿದರು. ಮಹಾಸಭಾದ ಮಾಜಿ ಅಧ್ಯಕ್ಷ ಡಿ.ಕೃಷ್ಣಪ್ಪ, ಉಪಾಧ್ಯಕ್ಷ ವದ್ದಟ್ಟಿ ಆಂಬರೀಷ್, ಷಾಮಿಯಾನ ಅಂಜಿನಪ್ಪ, ಕಾಳಿಂಗೇರಿ ಮಲ್ಲಿಕಾರ್ಜುನ, ಜೆಬಿಟಿ ಬಸವರಾಜ, ವಸಂತ್‌ಕುಮಾರ್, ಕಾಡರಘು, ಸತ್ಯನಾರಾಯಣ, ಪರಶುರಾಮ್, ಪರಿ ನಿಂಗಪ್ಪ, ರಾಮಕೃಷ್ಣ ಹೆಗಡೆ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ್ ಇತರರಿದ್ದರು.