ಜಿಲ್ಲೆ

ಸಂಡೂರಿನಲ್ಲಿ ರೈತನ ಮೇಲೆ ಚಿರತೆ ದಾಳಿ, ಕಲ್ಲಿನಿಂದ ಹೊಡೆದು ಓಡಿಸಿ ಪ್ರಾಣ ಉಳಿಸಿಕೊಂಡ ಪಂಪಾಪತಿ

Ballari

ಸಂಡೂರು: ತಾಲೂಕಿನ ಕೋಡಾಲು ಗ್ರಾಮದಲ್ಲಿ ಭಾನುವಾರ ಜಮೀನಿಗೆ ನೀರು ಹರಿಸಲು ಹೋಗಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ. ಕೆ.ಪಂಪಾಪತಿ (25) ಗಾಯಗೊಂಡಿದ್ದು, ಬಳ್ಳಾರಿ ವಿಮ್ಸ್‌ಗೆ ರವಾನಿಸಲಾಗಿದೆ.

ಗ್ರಾಮದ ಗುಡ್ಡದ ಬಳಿ ಇರುವ ಜಮೀನಿಗೆ ನೀರು ಹಾಯಿಸುವಾಗ ಏಕಾಏಕಿ ಚಿರತೆ ಎರಗಿದ್ದು, ತಲೆ, ತುಟಿಗಳಿಗೆ ಗಾಯಗೊಳಿಸಿದೆ. ಪಂಪಾಪತಿ ಕಲ್ಲಿನಿಂದ ಚಿರತೆ ಮುಖಕ್ಕೆ ಹೊಡೆದು ಜೋರಾಗಿ ತಳ್ಳಿದ್ದಲ್ಲದೆ, ಮತ್ತೊಂದು ಕಲ್ಲಿನಿಂದ ಅದರ ಮುಖಕ್ಕೆ ಬೀಸುತ್ತಿದ್ದಂತೆ ಓಡಿ ಹೋಗಿದೆ. ಇದರಿಂದ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಅರಣ್ಯ ರಕ್ಷಕ ಪ್ರಕಾಶ್ ಪರಿಶೀಲಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

ಕೆ.ಪಂಪಾಪತಿ (25) ಗಾಯಗೊಂಡಿದ್ದು, ಬಳ್ಳಾರಿ ವಿಮ್ಸ್‌ಗೆ ರವಾನಿಸಲಾಗಿದೆ. ಗ್ರಾಮದ ಗುಡ್ಡದ ಬಳಿ ಇರುವ ಜಮೀನಿಗೆ ನೀರು ಹಾಯಿಸುವಾಗ ಏಕಾಏಕಿ ಚಿರತೆ ಎರಗಿದ್ದು, ತಲೆ, ತುಟಿಗಳಿಗೆ ಗಾಯಗೊಳಿಸಿದೆ. ಪಂಪಾಪತಿ ಕಲ್ಲಿನಿಂದ ಚಿರತೆ ಮುಖಕ್ಕೆ ಹೊಡೆದು ಜೋರಾಗಿ ತಳ್ಳಿದ್ದಲ್ಲದೆ, ಮತ್ತೊಂದು ಕಲ್ಲಿನಿಂದ ಅದರ ಮುಖಕ್ಕೆ ಬೀಸುತ್ತಿದ್ದಂತೆ ಓಡಿ ಹೋಗಿದೆ. ಇದರಿಂದ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಅರಣ್ಯ ರಕ್ಷಕ ಪ್ರಕಾಶ್ ಪರಿಶೀಲಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.