ಸಂಡೂರು: ಜೀವನದಲ್ಲಿ ವ್ಯಾಯಾಮ, ಧ್ಯಾನ ಅಳವಡಿಸಿಕೊಂಡಾಗ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಡಿವೈಎಸ್ಪಿ ಪ್ರಸಾದ್ ಗೋಕಲ್ ಹೇಳಿದರು.
ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಕುರಿತ ಅರಿವಿನ ತರಬೇತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಕಾಲೇಜು ಆಡಳಿತ ಅಧಿಕಾರಿ ಕುಮಾರ್ ನಾನಾವಟೆ ಮಾತನಾಡಿ, ಒತ್ತಡ ಜೀವನದಲ್ಲಿ ಯಶಸ್ಸು ಕಾಣಬೇಕು. ಪೊಲೀಸ್ ಅಧಿಕಾರಿಗಳಿಗೆ ಸಮಯ ಪಾಲನೆ ಮುಖ್ಯವಾಗಿರುತ್ತದೆ. ಒತ್ತಡದಲ್ಲಿ ಆರೋಗ್ಯ ಹಾಳಾಗುವ ಸಂಭವ ಹೆಚ್ಚಿರುತ್ತದೆ. ಆರಕ್ಷಕ ಮತ್ತು ಶಿಕ್ಷಕ ವೃತ್ತಿ ನಿಭಾಯಿಸುವುದು ಕಷ್ಟಕರ. ವೃತ್ತಿಯಲ್ಲಿ ಯಶಸ್ಸು ಕಂಡರೆ ದೇಶಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದರು.
ಮನಶಾಸ್ತ್ರಜ್ಞರಾದ ಕಾವ್ಯಾ, ಶಾಂತಕುಮಾರ್, ಸಂಡೂರು ಪೊಲೀಸ್ ಉಪ ನಿರೀಕ್ಷಕ ಎಸ್.ಉಮೇಶ್, ಡಬ್ಲುೃಪಿಎಸ್‌ಐ ನಾಗರತ್ನಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಚೋರುನೂರು ಎಎಸ್‌ಐ ವೀರೇಶ್, ಪ್ರಕಾಶ್, ಚಂದ್ರಪ್ಪ, ಲೋಕೇಶ್, ತೋರಣಗಲ್ಲು ಠಾಣೆ ಮಹೇಶ್ ಬಣಕಾರ್, ರಘುರಾಮ ರೆಡ್ಡಿ, ಅಣ್ಣಪ್ಪ, ಸಂಡೂರು ಬಿ.ವೀರಭದ್ರ, ವಸೂರಪ್ಪ, ವಾಲ್ಯಾನಾಯ್ಕ, ಜಾಫರ್, ಸಂತೋಷ, ಕಾಲೇಜಿನ ನಾಗಭೂಷಣ್, ಆನಂದ್, ಪೇದೆಗಳಾದ ದೇವರಾಜ್, ವೀರಭದ್ರ ಇದ್ದರು.