ಅಪ್ಪು ಜನ್ಮದಿನದ ಪ್ರಯುಕ್ತ ಸಂಡೂರಿನಲ್ಲಿ ಡಾ.ಪುನೀತ್ ರಾಜಕುಮಾರ್ ಸೇವಾ ಟ್ರಸ್ಟ್‌ನಿಂದ ಶಾಲಾ ಮಕ್ಕಳಿಗೆ ಬ್ಯಾಗ್‌ಗಳನ್ನು ವಿತರಿಸಲಾಯಿತು. ವಕೀಲ ಗುಡೇಕೋಟೆ ನಾಗರಾಜ್, ಎಂಎಲ್‌ಕೆ.ನಾಯ್ಡು, ಟ್ರಸ್ಟ್ ಅಧ್ಯಕ್ಷ ಶಶಿಕಿರಣ್, ಗೌ.ಅಧ್ಯಕ್ಷ ರಘುನಾಥ್ ರಾಮಘಡ, ಉಪಾಧ್ಯಕ್ಷ ಕೆ.ವೀರೇಶ ಇತರರಿದ್ದರು. 
ಜಿಲ್ಲೆ

ತಂದೆಗೆ ತಕ್ಕ ಮಗ - ವಕೀಲ ಗುಡೇಕೋಟೆ ನಾಗರಾಜ್

ಸಂಡೂರು: ಡಾ.ಪುನೀತ್ ರಾಜಕುಮಾರ್ ನಟನೆಯೊಂದಿಗೆ ಸಮಾಜಸೇವೆ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ವಕೀಲ ಗುಡೇಕೋಟೆ ನಾಗರಾಜ್ ಹೇಳಿದರು.

ಪಟ್ಟಣದ ಪುರಸಭೆ ಬಸ್ ನಿಲ್ದಾಣ ಹಿಂಭಾಗದಲ್ಲಿ ಡಾ.ಪುನೀತ್ ರಾಜ್‌ಕುಮಾರ್ ಸೇವಾ ಟ್ರಸ್ಟ್‌ನಿಂದ ಆಯೋಜಿಸಿದ್ದ ಅಪ್ಪು 50ನೇ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುನೀತ್ ಅವರು ಸಾಧನೆಯಿಂದ ತಂದೆಗೆ ತಕ್ಕ ಮಗ ಎನಿಸಿದ್ದಾರೆ ಎಂದರು. ಶಾಲಾ ಮಕ್ಕಳಿಗೆ ಬ್ಯಾಗ್, ವೃದ್ಧರಿಗೆ ಊರುಗೋಲು ವಿತರಣೆ ಮಾಡಲಾಯಿತು. ರಕ್ತದಾನ ಶಿಬಿರದಲ್ಲಿ 30 ಜನರು ರಕ್ತದಾನ ಮಾಡಿದರು.

ಬಿಇಒ ಡಾ.ಐ.ಆರ್.ಅಕ್ಕಿ, ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ಮುಖ್ಯ ಶಿಕ್ಷಕ ಚೌಕಳಿ ಪರಶುರಾಮ್, ಎಂಎಲ್‌ಕೆ.ನಾಯ್ಡು, ಟ್ರಸ್ಟ್ ಅಧ್ಯಕ್ಷ ಶಶಿ ಕಿರಣ್, ಗೌ.ಅಧ್ಯಕ್ಷ ರಘುನಾಥ್ ರಾಮಘಡ, ಉಪಾಧ್ಯಕ್ಷರಾದ ಕೆ.ವೀರೇಶ, ಉಗ್ರ ನರಸಿಂಹ, ಕಾರ್ಯದರ್ಶಿ ಶ್ರೀನಿವಾಸ, ಸಹ ಕಾರ್ಯದರ್ಶಿ ವಿನಯ್, ಷರೀಫ್, ಗುರು, ವಿಜಯ್, ದರ್ಶನ, ರಮೇಶ್, ಮರೇಪ್ಪ, ಕಂಠಿ ಇತರರಿದ್ದರು.