ಸಂಡೂರು: ತಾಲೂಕಿನ ಚೋರನೂರು ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಭಾರಿ ಗಾಳಿ ಸಹಿತ ಜೋರಾಗಿ ಮಳೆಯಾಗಿದೆ. ಗಾಳಿ, ಮಳೆ ರಭಸಕ್ಕೆ ಸರ್ಕಾರಿ ಶಾಲೆಯ ಆವರಣದಲ್ಲಿದ್ದ ಮರವೊಂದು ಬೇರು ಸಮೇತ ನೆಲಕ್ಕುರುಳಿದೆ. ಗಂಗಪ್ಪ, ಹೊನ್ನೂರಸ್ವಾಮಿ, ರೇಣುಕಮ್ಮ ಅವರ ಮನೆಗಳ ಮೇಲೆ ಬೇವಿನ ಮರ ಕುಸಿದು ಬಿದ್ದಿದೆ. ಇದರಿಂದ ಸಿಮೆಂಟ್ ರೇಕುಗಳು ಮುರಿದು ಬಿದ್ದಿವೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಬಹುತೇಕ ಗ್ರಾಮಸ್ಥರು ಮನೆಯ ಬಾಗಿಲು ಹಾಕಿಕೊಂಡಿದ್ದರು.