ಸಂಡೂರಿನ ವಿವೇಕಾನಂದ ವಿದ್ಯಾಕೇಂದ್ರ ಶಾಲೆಗೆ ಮಕ್ಕಳ ಹಬ್ಬ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿದ ಶಾಸಕ ಬಿ.ಪಿ.ಹರೀಶ ಅವರಿಗೆ ಮಕ್ಕಳು ರಂಗೋಲಿಯಿಂದ ಬಿಡಿಸಿದ ಚಿತ್ರಗಳನ್ನು ತೋರಿಸಿದರು. ವಿದ್ಯಾ ಸಂಸ್ಥೆಯ ನಿರ್ದೇಶಕಿ ಟಿ.ಕೆ.ಸುಜಾತಾ, ಅಧ್ಯಕ್ಷ ಟಿ.ಕೆ.ದಯಾನಂದ್, ಪುರಸಭೆ ಸದಸ್ಯ ನರೇಂದ್ರ ಪಾಟೀಲ್ ಇತರರಿದ್ದರು. 
ಜಿಲ್ಲೆ

ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ

ಶಾಮಸುಂದರ್ ಕೊಪ್ಪಳಕರ್

ಸಂಡೂರು: ವಿದ್ಯಾರ್ಥಿಗಳು ಭತ್ತ ತುಂಬುವ ಚೀಲವಾಗಬಾರದು ಭತ್ತವನ್ನು ಬೆಳೆಯುವ ಪೈರಾಗಬೇಕು ಎಂದು ಹರಿಹರದ ಶಾಸಕ ಬಿ.ಪಿ.ಹರೀಶ ಹೇಳಿದರು.

ಶ್ರೀ ವಿವೇಕಾನಂದ ವಿದ್ಯಾಕೇಂದ್ರದಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ವಿವೇಕಾನಂದ ವಿದ್ಯಾ ಕೇಂದ್ರ ಉತ್ತಮ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪಾಲಕರ ಜವಾಬ್ದಾರಿ ಅತಿ ಮುಖ್ಯವಾಗಿದೆ. ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ಮತ್ತು ಅವರನ್ನು ಸುಶಿಕ್ಷಿತರನ್ನಾಗಿ ಮಾಡಬೇಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್.ಅಕ್ಕಿ ಮಾತನಾಡಿ, ವಿದ್ಯಾಥಿಗಳು ಶಿಕ್ಷಣದ ಜತೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು. ಶಿಕ್ಷಕರಾದ ಫಾರೂಕ್, ನಾಗರಾಜ, ಭಾಸ್ಕರ್, ಗೀತಾ ಪೋಳ್, ಅಮೂಲ್ಯಾ, ಪ್ರತಿಮಾ, ನಂದಿನಿ ಇತರರಿದ್ದರು.