ಸಂಡೂರು: ಹಳೇ ದರೋಜಿ ಬುಡ್ಗ ಜಂಗಮ ನವಗ್ರಾಮದ ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ತಾಪಂ ಇಒ ಎಸ್.ಷಡಕ್ಷರಯ್ಯಗೆ ಹಗಲುವೇಷ ಕಲಾವಿದರು ಸೋಮವಾರ ಮನವಿ ಸಲ್ಲಿಸಿದರು.
ಗ್ರಾಪಂ ಮಾಜಿ ಸದಸ್ಯ ವಿ.ರಾಮುಡು ಮಾತನಾಡಿ, 2003-04ನೇ ಸಾಲಿನಲ್ಲಿ ವೆಂಕಟರಾವ್ ಘೋರ್ಪಡೆ ಜಿಪಂ ಅಧ್ಯಕ್ಷರಾಗಿದ್ದಾಗ ಮನೆಗಳ ನಿರ್ಮಾಣವಾಗಿತ್ತು. ಈ ಮನೆಗಳಿಗೆ ಗ್ರಾಪಂನಿಂದ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದೆ. ಆದರೆ, ಹಕ್ಕುಪತ್ರ ನೀಡಿಲ್ಲ. ಗ್ರಾಮ ಸಭೆ ನಡೆಸಿ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು. ಅಶ್ವ ತಿಪ್ಪೇಸ್ವಾಮಿ, ಅಶ್ವ ದೊಡ್ಡ ಲಾಲಪ್ಪ, ಅಶ್ವ ಶರಭಯ್ಯ, ಮಂಜುನಾಥ, ಅಶ್ವ ಬಸವರಾಜ, ಅಶ್ವ ಸುರೇಶ, ಅಶ್ವ ನಾಗರಾಜ, ದೊಡ್ಡ ಗಾದಿಲಿಂಗ ಇತರರಿದ್ದರು.