ಸಂಡೂರು: ರಾಜ್ಯವೇ ಹೇಳುವ ಶ್ರೀಮಂತನಾಡು ಸಂಡೂರು ವಾಸ್ತವದಲ್ಲಿಇಲ್ಲಿನ ಪರಿಸ್ಥಿತಿ ಬೇರೆ ಇದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ತಾಲೂಕಿನ ಚೋರನೂರಿನಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಭಾನುವಾರ ನಡೆದ ಬಿಜೆಪಿ ಯುವ ಸಮಾವೇಶದಲ್ಲಿ ಮಾತನಾಡಿದರು.
ದೇಶದಲ್ಲಿ ಸಂಪತ್ ಭರಿತ ನಾಡು ಸಂಡೂರು. ಆದರೆ, ಹಿಂದುಳಿದಿದ ಕ್ಷೇತ್ರ ಎಂದರೆ ಸಂಡೂರು. ವಾಲ್ಮೀಕಿ ನಿಗಮದ ಹಗರಣ ಈ ಕ್ಷೇತ್ರದ ಕಾಂಗ್ರೆಸ್ ನಾಯಕರ ಪಾಲಿದೆ. ವಾಲ್ನೀಕಿ ಸಮಾಜದ ಹೆಸರಿನಲ್ಲಿ ಚುನಾಯಿತರಾಗಿ ಸಮಾಜಕ್ಕೆ ವಂಚನೆ ಮಾಡಿದ್ದಾರೆ. ಇನ್ನೂ ಬಿಜೆಪಿ ಒಳ ಮೀಸಲಾತಿ ತಗೆದುಕೊಂಡು ಬಂದರು. ಎಸ್ಟಿಗಳಿಗೆ ಮೀಸಲು ಹೆಚ್ಚಿಸಿದರು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಆಯೋಗ ಮಾಡಿ, ಮಾದಿಗರು, ಲಂಬಾಣಿಗಳು, ಭೋವಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸುವ ಅವಕಾಶ ಸಿಕ್ಕಿದೆ. ಕ್ಷೇತ್ರದ ಜನರ ಸದುಪಯೋಗ ಪಡೆಯಿರಿ ಎಂದು ಸಲಹೆ ನೀಡಿದರು.