ಸಂಡೂರಿನಲ್ಲಿ ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ಕುರಿತ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಸಂಚಾಲಕ ರಾಮಕೃಷ್ಣ ಹೆಗಡೆ ಮಾತನಾಡಿದರು. ಆದಿ ಜಾಂಬವ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ಐಹೊಳೆ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಪ್ರಮುಖರಾದ ಮಲ್ಲೇಶ್ ಕಮ್ಮತ್ತೂರು, ಹೊನ್ನೂರಸ್ವಾಮಿ, ಮರಿಸ್ವಾಮಿ, ಕಾಶಪ್ಪ, ತಾರಾನಗರ ದೇವದಾಸ್, ವೈಟಿಜಿ ಕುಮಾರ್ ಇತರರಿದ್ದರು. 
ಜಿಲ್ಲೆ

ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆಗೆ ಕ್ರಮ ವಹಿಸಿ

ಶ್ರೀನಾಥ

ಸಂಡೂರು: ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತ ನಿರ್ಮಾಣ ಮತ್ತು ಪುತ್ಥಳಿ ಸ್ಥಾಪನೆ ಕುರಿತು ಚರ್ಚಿಸಲು ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತಪರ ಸಂಘಟನೆಗಳು ಹಾಗೂ ಆದಿ ಜಾಂಬವ ಮಹಾಸಭಾ ಪ್ರಮುಖರು ಗುರುವಾರ ಸಭೆ ನಡೆಸಿದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ರಾಮಕೃಷ್ಣ ಹೆಗಡೆ ಮಾತನಾಡಿ, ಅಂಬೇಡ್ಕರ್ ವೃತ್ತ ನಿರ್ಮಿಸಿ ಪ್ರತಿಮೆ ಸ್ಥಾಪಿಸಲು ಆದಿ ಜಾಂಬವ ಮಹಾಸಭಾ, ದಲಿತ ಮತ್ತು ಕನ್ನಡಪರ ಸೇರಿದಂತೆ ಹಲವಾರು ಸಂಘಟನೆಗಳಿಂದ ಮನವಿ ಸಲ್ಲಿಸಲಾಗಿತ್ತು. 2022ರ ಸೆ.7ರಂದು ಪುರಸಭೆಯಿಂದ ಸಂಘಟನೆಗಳ ಮತ್ತು ಸರ್ವ ಸದಸ್ಯರ ಸಭೆ ಕರೆದು ಪೊಲೀಸ್ ಠಾಣೆ ಮುಂಭಾಗದಲ್ಲಿ ವೃತ್ತ ನಿರ್ಮಿಸಿ ಪುತ್ಥಳಿ ಪ್ರತಿಷ್ಠಾಪನೆಗೆ ಠರಾವು ಪಾಸು ಮಾಡಲಾಗಿದೆ. 2023 ರ ಮಾ.9ರಂದು ಎಸಿಗೆ ಮನವಿ ಮಾಡಲಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದ ಈ.ತುಕಾರಾಮ್ 2023ರಲ್ಲಿ ಭೂಮಿಪೂಜೆ ನೆರವೇರಿಸಿ, ರಸ್ತೆ ವಿಸ್ತರಣೆ ಬಳಿಕ ಮಾಡೋಣ ಎಂದು ಹೇಳಿದ್ದರು. ಆದರೂ ಇದುವರೆಗೆ ಬೇಡಿಕೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂಬೇಡ್ಕರ್ ವೃತ್ತ ನಿರ್ಮಾಣ ಮತ್ತು ಪುತ್ಥಳಿ ಸ್ಥಾಪನೆ ಆಗಬೇಕು. ಏ.12ರಂದು ಸ್ವಾಭಿಮಾನಿ ಅಂಬೇಡ್ಕರ್ ಸಂಘಟನೆ ಮೂಲಕ ನಾವೇ ವೃತ್ತ ನಿರ್ಮಿಸಿ ಪುತ್ಥಳಿ ಪ್ರತಿಷ್ಠಾಪನೆಗೆ ಮುಂದಾಗುವುದಾಗಿ ಎಚ್ಚರಿಸಿದರು.

ಪ್ರಮುಖರಾದ ಸಿ.ಅಶೋಕ್, ನಾರಾಯಣರಾವ್ ಪೋಳ್, ಹೊನ್ನಾಳಪ್ಪ, ರೈತ ಸಂಘದ ಎಂಎಲ್‌ಕೆ.ನಾಯ್ಡು, ಧರ್ಮಾನಾಯ್ಕ, ಕೃಷ್ಣಾ ನಗರದ ಡಿ.ಎಫ್.ಸುಬಾನ್, ಹಿರಾಳ್ ದಾದಾ ಕಲಂದರ್, ಎಚ್.ಕುಮಾರಸ್ವಾಮಿ, ಹನುಮಂತರೆಡ್ಡಿ, ದುರುಗೇಶ್, ಹೊಸಳ್ಳಿ ಗಂಗಪ್ಪ ಮುಂತಾದವರಿದ್ದರು.