ಜಿಲ್ಲೆ

ಉತ್ತಮ ಕರ್ಮ ಜಗತ್ತಿಗೆ ಅತ್ಯಂತ ಅವಶ್; ಜೆಎಸ್‌ಡಬ್ಯ್ಲು ಸ್ಟೀಲ್ ಕಂಪನಿಯ ಅಧ್ಯಕ್ಷ ಪಿ.ಕೆ.ಮುರುಗನ್ ಅಭಿಪ್ರಾಯ

ಸಂಡೂರು: ವ್ಯಕ್ತಿಯ ದೇಹ ಅವನ ಮೊದಲ ಸಂಗಾತಿಯಾಗಿರುತ್ತದೆ ಎಂದು ಜೆಎಸ್‌ಡಬ್ಯ್ಲು ಸ್ಟೀಲ್ ಕಂಪನಿಯ ಅಧ್ಯಕ್ಷ ಪಿ.ಕೆ.ಮುರುಗನ್ ಅಭಿಪ್ರಾಯಪಟ್ಟರು.

ಪಟ್ಟಣದ ಘೋರ್ಪಡೆ ಒಡೆತನದ ಸಂಡೂರು ವಸತಿ ಶಾಲೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಅಖಿಲ ಭಾರತ ಪಬ್ಲಿಕ್ ಶಾಲೆಗಳ ರಾಷ್ಟ್ರೀಯ ಯೋಗ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಗವದ್ಗೀತೆಯ ವೃತ್ತಾಂತವನ್ನು ಪ್ರಸ್ತಾಪಿಸುತ್ತ, ್ತಶ್ರೀಕೃಷ್ಣ್ಣ ತಿಳಿಸಿದಂತೆ ಮನುಷ್ಯನಿಗೆ ತಂದೆ-ತಾಯಿ, ಸ್ನೇಹಿತರು, ಬಂಧುಬಳಗ, ಹಿತೈಷಿಗಳಿಗಿಂತ ಮೊದಲಯದು ನಮ್ಮ ದೇಹವೇ ನಮ್ಮ ವಿಳಾಸವಾಗಿರುತ್ತದೆ. ಒಂದು ವೇಳೆ ದೇಹ ನಮಗೆ ಸ್ಪಂದಿಸದೆ ಹೋದರೆ ಏನಿದ್ದರೂ ವ್ಯರ್ಥ. ಉತ್ತಮವಾದ ಯೋಗ ಉತ್ತಮ ಆರೋಗ್ಯಕ್ಕೆ, ಹಾಗೆಯೇ ನಡಿಗೆ, ಊಟ ಹಾಗೂ ಸತ್‌ಚಿಂತನೆ, ಉತ್ತಮ ಕರ್ಮ ಈ ಜಗತ್ತಿಗೆ ಅತ್ಯಂತ ಅವಶ್ಯಕ ಸಂಗತಿಗಳಾಗಿವೆ. ಶಿಕ್ಷಣ ಎಂಬುದು ನಮ್ಮ ವೃತ್ತಿ ಬದುಕಿಗೆ ಒಂದು ಪಾಸ್ ಪೋರ್ಟ್ ಅಷ್ಟೇ. ಆದರೆ, ದೇಹ ಇಡೀ ಬದುಕಿನುದ್ದಕ್ಕೂ ನಮಗೆ ಅತ್ಯಂತ ಪ್ರಮುಖವಾಗಿದೆ. ಯೋಗ ಸ್ಪರ್ಧೆಯನ್ನು ಸ್ಪರ್ಧೆಯಂತೆಯೇ ನೋಡಿ ಇಲ್ಲಿ ಭಾಗವಹಿಸುವುದಷ್ಟೇ ಮುಖ್ಯ ಹೊರತು ಗೆಲ್ಲುವುದಲ್ಲ ಎಂದರಲ್ಲದೆ, ಸಂಡೂರು ಶಿಕ್ಷಣ ಸಂಸ್ಥೆಯು ಈ ಭಾಗದಲ್ಲಿ ಶೈಕ್ಷಣಿಕವಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿ ಮೌಲ್ಯಯುತ ಶಿಕ್ಷಣ ನೀಡುತ್ತಿದೆ ಎಂದು ಶ್ಲಾಘಿಸಿದರು.

ಸ್ಮಯೋರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಹೀರ್ಜಿ ಅಜಯ್ ಘೋರ್ಪಡೆ ಮಾತನಾಡಿ, 1959ರಲ್ಲಿ ತಮ್ಮ ತಾತ ಎಂ.ವೈ.ಘೋರ್ಪಡೆಯವರು ಸ್ಥಾಪಿಸಿದ ಎಸ್‌ಆರ್‌ಎಸ್ ಶಾಲೆ ಇಂದು 1700 ವಿದ್ಯಾರ್ಥಿಗಳಿಂದ ಬೃಹದಾಕಾರವಾಗಿ ಬೆಳೆದಿದೆ. 1983ರಲ್ಲಿ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ನ್ನು ಇಲ್ಲಿಯೇ ಆಯೋಜಿಸಲಾಗಿತ್ತು. ಇದೀಗ 40 ವಷರ್ಗಳ ಬಳಿಕ ರಾಷಟ್ರೆಮಟ್ಟದ ಯೋಗಸ್ಪರ್ಧೆ ಆಯೋಜಿಸಿದೆ ಎಂದರು.

ಇದೇ ವೇಳೆ ಬಹೀರ್ಜಿ ಘೋರ್ಪಡೆಯವರಿಂದ ಸ್ಪರ್ಧಾರ್ಥಿಗಳಿಗೆ ಪ್ರತಿಜ್ಞ್ಞಾವಿಧಿ ಬೋಧಿಸಲಾಯಿತು. ಸ್ಪರ್ಧೆಯಲ್ಲಿ ಜೈಪುರದ ಮಹಾರಾಣಗಾಯತ್ರಿದೇವಿ ಬಾಲಕಿಯರ ಶಾಲೆ, ಅಜ್ಮೀರ್‌ನ ಮಾಯೋ ಕಾಲೇಜು, ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ಶಾಲೆ, ಹೈದರಾಬಾದ್‌ನ ಪಬ್ಲಿಕ್ ಸ್ಕೂಲ್, ಇಂದೋರ್‌ನ ಎಮರಾಲ್ಡ್ ಹೈಟ್ಸ್ ಇಂಟರ್‌ನ್ಯಾಷನಲ್ ಸ್ಕೂಲ್, ಗ್ವಾಲಿಯರ್‌ನ ಸಿಂಧಿಯಾ ಕನ್ಯಾ ವಿದ್ಯಾಲಯ, ಮಥುರಾದ ದೆಹಲಿ ಪಬ್ಲಿಕ್ ಸ್ಕೂಲ್ ಹಾಗೂ ಸಂಡೂರಿನ ಎಸ್‌ಆರ್‌ಎಸ್ ಶಾಲೆಯ 14, 17ಹಾಗೂ 19 ವರ್ಷದೊಳಗಿನ 120 ವಿದ್ಯಾರ್ಥಿಗಳು ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ರಾಜವಂಶಸ್ಥರಾದ ಅಜಯ್ ಘೋರ್ಪಡೆ, ಸೂರ್ಯಪ್ರಭ ಅಜಯ್ ಘೋರ್ಪಡೆ, ಶಿವಪುರ ಶಿಕ್ಷಣ ಸಮಿತಿ ಅಧ್ಯಕ್ಷೆ ಯಶೋಧರ ಘೋರ್ಪಡೆ, ಏಕಾಂಬರ್ ಅಜಯ್ ಘೋರ್ಪಡೆ, ಸ್ಮಯೋರ್ ಸಂಸ್ಥೆಯ ಅಬ್ದುಲ್ ಸಲೀಮ್, ಶಿವಪುರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಕರ್ನಲ್ ರವೀಂದ್ರ ರೆಡ್ಡಿ, ಜಗದೀಶ್ ಬಸಾಪುರ, ರಮೇಶ್ ಘೋರ್ಪಡೆ ಇದ್ದರು. ಪ್ರಾಚಾರ್ಯೆ ರೇಖಾ ಕುಂಬಾರ್, ಪ್ರತಿಭಾ, ಟಿ.ಕೆ.ಅರ್ಪಿತಾ ನಿರ್ವಹಿಸಿದರು.