ಜಿಲ್ಲೆ

ಸಮಾಜಕ್ಕೆ ನೀಡುವ ಕೊಡುಗೆ ಸಾರ್ಥಕ - ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ರವಿ ಕಾಮತ್ ಹೇಳಿ

Mangaluru - Nishantha Narayana

ಪುತ್ತೂರು: ಸಮಾಜದಿಂದ ಪಡೆದ ಸವಲತ್ತುಗಳನ್ನು ಮತ್ತೆ ಕೊಡುಗೆಯಾಗಿ ನೀಡಬೇಕು. ಜಗತ್ತಿನಲ್ಲಿ ಎಲ್ಲ ಜೀವಿಗಳು ಒಂದಕ್ಕೊಂದು ಪೂರಕವಾಗಿದ್ದು, ಭವಿಷ್ಯವನ್ನು ತಿಳಿದುಕೊಳ್ಳುವ ಜ್ಞಾನವನ್ನು ಭಗವಂತ ಯಾರಿಗೂ ನೀಡಿಲ್ಲ. ಉದ್ದೇಶವನ್ನಿಟ್ಟುಕೊಂಡು ಪ್ರತಿಯೊಂದರ ಸೃಷ್ಟಿಯಾಗಿದ್ದು, ಇದನ್ನು ಅರಿತುಕೊಂಡು ಜೀವನ ನಡೆಸಿದಾಗ ಸಾರ್ಥಕ್ಯ ಪಡೆಯಬಹುದು ಎಂದು ಶಿವಮೊಗ್ಗದ ಉದ್ಯಮಿ ರವಿ ಕಾಮತ್ ಹೇಳಿದರು.

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಶಿಶುಮಂದಿರ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಹೊನಲು ಬೆಳಕಿನ ಕ್ರೀಡೋತ್ಸವ ಹಾಗೂ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಹೈನುಗಾರ ಜಯಗುರು ಆಚಾರ್ ಎಚ್., ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ ಶಾಲೆಯ ಹಿರಿಯ ವಿದ್ಯಾರ್ಥಿನಿ ಡಾ. ರೂಪಶ್ರೀ ಶ್ರವಣ್ ಕೆ. ಅವರನ್ನು ಸನ್ಮಾನಿಸಲಾಯಿತು. ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮತ್ತು ಸಾಹಸ ಪ್ರದರ್ಶನ ನಡೆಯಿತು. ಯಕ್ಷಗಾನ ಆಧಾರಿತ ನೃತ್ಯ ರೂಪಕ ಪ್ರದರ್ಶನಗೊಂಡಿತು. ಅಧ್ಯಕ್ಷತೆಯನ್ನು ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎಸ್. ಜಯರಾಮ ಕೆದಿಲಾಯ ವಹಿಸಿದ್ದರು.

ಬೆಳ್ಳಾರೆಯ ವಾಸ್ತು ರಚನಾ ಕನ್‌ಸ್ಪಕ್ಷನ್ ಸಿವಿಲ್ ಕಂಟ್ರಾಕ್ಟರ್ ವಿಶ್ವನಾಥ ಕೆ., ಶಾಲೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ನಿವೃತ್ತ ಶಿಕ್ಷಣಾಽಕಾರಿ ಎಸ್. ಜಿ. ಕೃಷ್ಣ, ಆಡಳಿತ ಮಂಡಳಿ ಸದಸ್ಯರಾದ ಪ್ರಸನ್ನ ಭಟ್ ಎನ್., ಅಶೋಕ್ ಕುಮಾರ್ ಪುತ್ತಿಲ, ಡಾ. ಶಿವಾನಂದ, ಶಿಕ್ಷಕ ರಕ್ಷಕ ಸಂಘದ ರಾಜೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು.

ಆಡಳಿತ ಸಮಿತಿ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಜಯಮಾಲಾ ವಿ. ಎನ್. ವಾರ್ಷಿಕ ವರದಿ ವಾಚಿಸಿದರು. ಸದಸ್ಯ ಹರೀಶ್ ಪುತ್ತೂರಾಯ ವಂದಿಸಿದರು.

ಸಾಂದೀಪನಿಯ ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಉತ್ತಮ ಭವಿಷ್ಯ ರೂಪಿಸುವ ಕಾರ್ಯವಾಗಬೇಕಾಗಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ೫ ಸಾವಿರಕ್ಕೂ ಅಽಕ ಮಂದಿ ವರ್ಷಕ್ಕೆ ವಿದ್ಯಾಭ್ಯಾಸ ಮುಗಿಸಿ ಹೊರಬರುತ್ತಿದ್ದಾರೆ. ಉದ್ಯಮಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ.

| ಅಶೋಕ್ ಕುಮಾರ್ ರೈ

ಶಾಸಕರು, ಪುತ್ತೂರು