ಸಂಡೂರು: ಸಮೀಪದ ಯಶವಂತನಗರದ ರಾಮನಮಲೆ ಬ್ಲಾಕ್ ಬಳಿ ಅಕ್ರಮವಾಗಿ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದವರನ್ನು ಬಂಧಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸೈಯದ್ ದಾದಾ ಖಲಂದರ್ ಭಾನುವಾರ ತಿಳಿಸಿದ್ದಾರೆ.
ಆರೋಪಿಗಳಾದ ಸುಶೀಲಾನಗರದ ಮುತ್ಯಾನಾಯ್ಕ (60), ಲಚ್ಚಾನಾಯ್ಕ (65) ಅವರನ್ನು ಬಂಧಿಸಲಾಗಿದೆ. ಸುಶೀಲಾನಗರದ ಶಂಕ್ರಾನಾಯ್ಕ(48) ತಪ್ಪಿಸಿಕೊಂಡಿದ್ದಾನೆ. 3 ಕೆ.ಜಿ ಶ್ರೀಗಂಧದ ಚಕ್ಕೆ ಹಾಗೂ ಕೊಡಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಆರ್‌ಎಫ್‌ಒ ತಿಳಿಸಿದ್ದಾರೆ. ಉತ್ತರ ವಲಯದ ಡಿಆರ್‌ಎಫ್‌ಒ ಇಮಾಂಸಾಬ್ ಮತ್ತು ಸಿಬ್ಬಂದಿ ಇದ್ದರು.