ಜಿಲ್ಲೆ

ಶ್ರೀಗಂಧದ ಮರ ಕಳ್ಳತನ

Davangere - Desk - Ganesh M K

ಜಗಳೂರು: ತಾಲೂಕಿನ ಖಿಲಾಕಣ್ವಕುಪ್ಪೆ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಒಂದು ಲಕ್ಷ ರೂ. ಬೆಲೆಯ ಶ್ರೀಗಂಧದ ಮರವನ್ನು ಬುಧವಾರ ರಾತ್ರಿ ಮರಗಳ್ಳರು ಕತ್ತರಿಸಿ ಕದ್ಯೋಯ್ದಿದ್ದಾರೆ.

ಕಿಲಾಕಣ್ವಕುಪ್ಪೆ ಗ್ರಾಮದ ರೈತ ದುರುಗಪ್ಪ ಅವರು ತಮ್ಮ ಜಮೀನಿನಲ್ಲಿ ಸುಮಾರು ಎಂಟು ವಷರ್ಗಳಿಂದ ನಾಲ್ಕು ಶ್ರೀಗಂಧದ ಮರಗಳನ್ನು ಬೆಳೆಸಿದ್ದ್ದರು. ಅದರಲ್ಲಿ ಒಂದು ಮರವನ್ನು ಕಳ್ಳತನ ಮಾಡಲಾಗಿದೆ.

ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಎಸ್.ಡಿ. ಸಾಗರ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.