ಜಿಲ್ಲೆ

ಗಂಧ ಕದ್ದ ಸಿಕ್ಕಿ ಬಿದ್ದ

Uttara Kannada - Subash Hegde

ಸಿದ್ದಾಪುರ: ಪಟ್ಟಣ ಕೊಂಡ್ಲಿಯ ಮನೆಯೊಂದರ ಆವಾರದಲ್ಲಿದ್ದ ಶ್ರೀಗಂಧದ ಮರವನ್ನು ಕಡಿದು ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಹಸುವಂತೆ ಗ್ರಾಮದ ಹನುಮಂತ ದ್ಯಾವಾ ನಾಯ್ಕ ಬಂಧಿತ.

ಹಾಳತಕಟ್ಟಾದ ಹಣಜೀಬೈಲ್ ಕ್ರಾಸ್ ಬಳಿ ಪೊಲೀಸರು ಗಂಧದ ಕೊರಡಿನೊಂದಿಗೆ ಸಿಕ್ಕಿ ಬಿದ್ದಿದ್ದಾನೆ. ಆತನಿಂದ 1.25 ಲಕ್ಷ ರೂ. ಬೆಲೆಯ ಗಂಧದ ತುಂಡು,ಮೊಬೈಲ್ ಮುಂತಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಎಸ್‌ಐ ಅನಿಲ ಎಂ.ಪ್ರಕರಣ ದಾಖಲಿಸಿದ್ದಾರೆ.