ಜಿಲ್ಲೆ

ಚಿತ್ರನಟಿ ರಾಗಿಣಿ ಅಂತ ಪ್ರಚಾರಕ್ಕೆ ತಗೊಂಡ್ವಿ, ಡ್ರಗ್ಸ್ ಹುಡುಗಿ ಅಂತಲ್ಲ

ಬೆಂಗಳೂರು: ಚಿತ್ರನಟಿ ರಾಗಿಣಿ ಅಂತ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರಕ್ಕೆ ತಗೊಂಡ್ವಿ. ಡ್ರಗ್ಸ್ ಹುಡುಗಿ ಅಂತಲ್ಲ. ಹೀಗೆಂದವರು; ಜಲ ಸಂಪನ್ಮೂಲ ಸಚಿವ‌ ರಮೇಶ್‌ ಜಾರಕಿಹೊಳಿ. ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಚಿವರೊಂದಿಗೆ ಡ್ರಗ್ಸ್ ಪೆಡ್ಲರ್​ಗಳು ಫೋಟೋ ತೆಗೆಯಿಸಿಕೊಂಡಿದ್ದಾರೆ ಎಂದಾಕ್ಷಣ ಪ್ರಭಾವ ಬೀರುತ್ತಾರೆ ಎನ್ನುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಜತೆಗೆ ಫೋಟೋ ತೆಗೆಯಿಸಿಕೊಂಡಿರುವುದು ಬಂದಿದೆ. ನನ್ನ ಜತೆಗಿರುವ ಫೋಟೋ ಬರಬಹುದು. ಹಾಗೆಂದ ಮಾತ್ರ ಸ್ನೇಹ, ನಂಟು ಕಲ್ಪಿಸಲಾಗದು. ಪ್ರಕರಣ ತನಿಖೆ ಹಂತದಲ್ಲಿರುವಾಗ ಏನನ್ನದಾರೂ ಹೇಳುವುದು ಸಮುಚಿತವಲ್ಲ ಎಂದರು.

ಸಚಿವಾಕಾಂಕ್ಷಿಗಳು ಕಾಯಬೇಕು

ಸಚಿವರಾಗುವುದಕ್ಕೆ ಆಕಾಂಕ್ಷಿಗಳು ಕಾಯಬೇಕು. ನಾವು 14 ತಿಂಗಳು ಕಾದಿದ್ದೇವೆ. ಅದರಲ್ಲಿ 8 ತಿಂಗಳು ಕೋರ್ಟ್​ಗೆ ಅಲೆದಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಮ್ಮ ಸ್ನೇಹಿತರಿಗೆ ತಾಳ್ಮೆ ಮಂತ್ರ ಬೋಧಿಸಿದರು.

ಅಧಿವೇಶನದ ಮುನ್ನವೇ ಆಪ್ತರು ಸಚಿವರಾಗುತ್ತಾರೆ ಎಂದು ನಾನು ಭವಿಷ್ಯ ನುಡಿಯಲಾರೆ. ಹೈಕಮಾಂಡ್, ಸಿಎಂ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವರು. ವಿಳಂಬವಾಗಿದೆ ಎಂದೇನಲ್ಲ, ತಾಂತ್ರಿಕ ಇನ್ನಿತರ ಕಾರಣಗಳಿರುತ್ತವೆ. ನಾನೂ ಒತ್ತಡವೂ ಹೇರುವುದಿಲ್ಲ.