ಹರಪನಹಳ್ಳಿಯಲ್ಲಿ ಎಐಕೆಎಸ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಧರಣಿ ನಡೆಸಿದರು. ಪ್ರಮುಖರಾದ ಎಚ್.ಎಂ. ಮಹೇಶ್ವರಸ್ವಾಮಿ, ಎ.ಎಂ.ವಿಶ್ವನಾಥ, ಎ.ದುರುಗಪ್ಪ, ಹನುಮಂತನಾಯ್ಕ, ದುಗ್ಗಾವತ್ತಿ ಹನುಮಂತಪ್ಪ, ರಮೇಶನಾಯ್ಕ, ಅಭಿಷೇಕ ಬಣಕಾರ, ಅರಸೀಕೆರೆ ರಂಗಪ್ಪ, ಸಂದೇರ ಪರಶುರಾಮ, ಕರಿಯಪ್ಪ, ಉಚ್ಚಂಗಿದುರ್ಗ ಚೌಡಪ್ಪ, ಹರಿಯಮ್ಮನಹಳ್ಳಿ ಬಸವರಾಜ, ಹಲಗಿ ಸುರೇಶ ಇತರರಿದ್ದರು. 
ಜಿಲ್ಲೆ

ಗರ್ಭಗುಡಿ ಕಾಮಗಾರಿ ಮತ್ತೆ ಆರಂಭಿಸಿ

Kopala - Desk - Eraveni

ಹರಪನಹಳ್ಳಿ: ನನೆಗುದಿಗೆ ಬಿದ್ದಿರುವ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಮತ್ತೆ ಆರಂಭಕ್ಕೆ ಆಗ್ರಹಿಸಿ ಎಐಕೆಎಸ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರವಾಸಿ ಮಂದಿರ ವೃತ್ತದಲ್ಲಿ ಮಂಗಳವಾರ ಧರಣಿ ನಡೆಸಿ, ಎಸಿ ಚಿದಾನಂದ ಗುರುಸ್ವಾಮಿಗೆ ಮನವಿ ಸಲ್ಲಿಸಿದರು.

ಎಐಕೆಎಸ್ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ ಮಾತನಾಡಿ, ಮಾಜಿ ಸಿಎಂ ನಿಜಲಿಂಗಪ್ಪ ಅವರ ಕನಸ್ಸಿನ ಕೂಸೆಂದು ಹೇಳಲಾಗುವ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆ ಅನೇಕ ಮುಖ್ಯಮಂತ್ರಿಗಳು ಬಂದು ಹೋದರೂ ಪೂರ್ಣಗೊಂಡಿಲ್ಲ. ಸುಮಾರು 4600 ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟು ರೈತರ ಬದುಕು ಹಸನಾಗುತ್ತದೆ. ಇಲ್ಲಿ ನಿರ್ಮಾಣವಾಗುವ ಪಿಕಪ್‌ನಲ್ಲಿ 50 ದಶಲಕ್ಷ ಘನ ಅಡಿಯಷ್ಟು ನೀರು ಸಂಗ್ರಹವಾಗುವುದರಿಂದ ತಾಲೂಕಿನ 60 ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗುತ್ತದೆ ಎಂದರು.

ಹಾವೇರಿ ಜಿಲ್ಲೆಗೆ ಈ ಭಾಗದ ಜನರು ಸಂಚಾರ ಮಾಡಲು ಇಲ್ಲಿ ನಿರ್ಮಾಣವಾಗುವ ಬ್ರಿಡ್ಜ್‌ದಿಂದ ಅನುಕೂಲವಾಗಲಿದೆ. ತಾಲೂಕಿನ 132 ಗ್ರಾಮಗಳಿಗೆ ಕುಡಿಯುವ ನೀರು ಕೊಡಬಹುದು. ಇಂತಹ ಮಹತ್ತರ ಯೋಜನೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಮರು ಆರಂಭಕ್ಕೆ ಆಗ್ರಹಿಸಿ ತಾಲೂಕಿನ 37 ಗ್ರಾಪಂಗಳ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸಭಾ ನಡಾವಳಿಯನ್ನು ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ಅದರೆ, ಈವರೆಗೂ ಸರ್ಕಾರ ಇತ್ತ ಗಮನ ಕೊಡುತ್ತಿಲ್ಲ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.