ಜಿಲ್ಲೆ

ಕೃಷ್ಣಮೃಗ ಅಭಯಾರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ: 8 ಆರೋಪಿಗಳ ಬಂಧನ

Haveri - Kariyappa Aralikatti

ರಾಣೆಬೆನ್ನೂರ: ಇಲ್ಲಿಯ ಕೃಷ್ಣಮೃಗ ಅಭಯಾರಣ್ಯದ ಚಳಗೇರಿ ಹಾಗೂ ಕರೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತೊಡಗಿದ್ದ 8 ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಒಂದು ಟ್ರಾ$್ಯಕ್ಟರ್​, ಎರಡು ಬೈಕ್​ ಹಾಗೂ ಎರಡು ಜನರೇಟರ್​ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಚಳಗೇರಿ ಹಾಗೂ ಕರೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಈ ವೇಳೆ ಕಲ್ಲುಗಣಿಗಾರಿಕೆಯಲ್ಲಿ ತೊಡಗಿದ್ದ ಮುನೀರ್​ಸಾಬ್​ ಬೇಳಕೆರಿ, ಚಿತ್ರಪ್ಪ ಯಲಿಗಾರ, ಚಿಕ್ಕಪ್ಪ ತಾವರಗುಂದಿ, ನಾಗರಾಜ ತಾವರಗುಂದಿ, ರಾಜು ಸುರ್ವೆ, ಶಿವಾಜಪ್ಪ ನಸುನಾಯ್ಕರ್​, ಶಾಂತಪ್ಪ ಹಳಿಯಪ್ಪನವರ, ಗುಡ್ಡಪ್ಪ ತರೇದಹಳ್ಳಿ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಕಲ್ಲುಗಣಿಗಾರಿಕೆಗೆ ಬಳಸುತ್ತಿದ್ದ ಒಂದು ಟ್ರಾ$್ಯಕ್ಟರ್​, ಎರಡು ಬೈಕ್​ ಹಾಗೂ ಎರಡು ಜನರೇಟರ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಹಾವೇರಿ ಪ್ರಾದೇಶಿಕ ಅರಣ್ಯ ವಿಭಾಗದ ಸಂರಕ್ಷಣಾಧಿಕಾರಿ ಅಬ್ದುಲ್​ ಅಜೀಜ್​ಶೇಖ್​ ಮಾರ್ಗದರ್ಶನದಲ್ಲಿ ತಾಲೂಕು ವನ್ಯಜಿವಿ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್​ ಪೂಜಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿ(ಪರೀಕ್ಷಾರ್ಥ) ಶ್ರೀನಿವಾಸ ಆರ್​., ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರೆಡ್ಡಿ ಮಂಕಣಿ, ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.