ಜಿಲ್ಲೆ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯಿಂದ ಪಾವಿತ್ರ್ಯ

ವಿಜಯವಾಣಿ ಸುದ್ದಿಜಾಲ ಬೆಳ್ವೆ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯು ಕ್ಷೇತ್ರದ ಪಾವಿತ್ರ್ಯತೆ ಹೆಚ್ಚಿಸುತ್ತದೆ. ಜನರು ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಶ್ರಮಧಾನದ ಮೂಲಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಬೆಳ್ವೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ ಹೇಳಿದರು.

ಅವರು ಬೆಳ್ವೆ ಶ್ರೀಶಂಕರನಾರಾಯಣ ದೇವಳದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ವೆ ವಲಯ, ಜನಜಾಗೃತಿ ವೇದಿಕೆ ಬೆಳ್ವೆ ವಲಯ, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಹಾಗೂ ಲಿಯೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಧಾರ್ಮಿಕ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಳ್ವೆ ಶ್ರೀ ಶಂಕರನಾರಾಯಣ ದೇವಳದ ಮೊಕ್ತೇಸರ ಬಿ.ಶಂಕರ ಶೆಟ್ಟಿ ಬೆಳ್ವೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಸಂಸ್ಥೆಗಳು ಹಾಗೂ ಜನರು ದೇವಳಗಳಲ್ಲಿ ಹಮ್ಮಿಕೊಳ್ಳುವ ಧಾರ್ಮಿಕ ಶೃದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಸೇವಾ ಮನೋಭಾವನೆಯೊಂದಿಗೆ ತೊಡಗಿಸಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದರು.

ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಸಂಜೀವ ಆರ್ಡಿ, ಸದಸ್ಯೆ ಭಾರ್ಗವಿ ಪಿ.ಭಟ್ ಗೋಳಿಯಂಗಡಿ, ಚಂದ್ರಿಕಾ ಬೆಳ್ವೆ, ತೀರ್ಥಕಲಾ, ಲಿಯೋ ಕ್ಲಬ್ ಅಧ್ಯಕ್ಷ ಸೃಜನ್ ಶೆಟ್ಟಿ, ಕಾರ್ಯದರ್ಶಿ ಸಾನಿಧ್ಯ, ಕೋಶಾಧಿಕಾರಿ ಪ್ರಜ್ವಲ್, ಶ್ರೀಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆ ಬೆಳ್ವೆ ವಲಯ ಮೇಲ್ವಿಚಾರಕ ರಾಘವೇಂದ್ರ ಗೌಡ, ಸೇವಾ ಪ್ರತಿನಿಧಿ, ಪ್ರಶಾಂತ್ ಗುಮ್ಮೋಲ, ಅಲ್ಬಾಡಿ ಒಕ್ಕೂಟದ ಅಧ್ಯಕ್ಷ ರವಿಚಂದ್ರ ನಾಯ್ಕ ಅಲ್ಬಾಡಿ, ಉಪಾಧ್ಯಕ್ಷ ಕೃಷ್ಣ ಮರಕಾಲ ಅಲ್ಬಾಡಿ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ ಸ್ವಾಗತಿಸಿದರು. ಪ್ರಶಾಂತ್ ಗುಮ್ಮೋಲ ನಿರೂಪಿಸಿದರು. ರಾಘವೇಂದ್ರ ಗೌಡ ವಂದಿಸಿದರು.