ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಆಯೋಜಿಸಿರುವ ‘ಸಂಚಲನ ರಂಗೋತ್ಸವ’ವನ್ನು ಸೋಮವಾರ ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ ಉದ್ಘಾಟಿಸಿದರು. ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಿರಿಗೇರೆ ಮಂಜು, ದೀಪಕ್ ಮೈಸೂರು ಇತರರಿದ್ದರು.  
ಜಿಲ್ಲೆ

ಸಂಚಲನ ರಂಗೋತ್ಸವಕ್ಕೆ ಚಾಲನೆ

ಮೈಸೂರು: ಸಂಚಲನ ಮೈಸೂರು ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಆಯೋಜಿಸಿರುವ ‘ಸಂಚಲನ ರಂಗೋತ್ಸವ’ಕ್ಕೆ ಸೋಮವಾರ ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ ಚಾಲನೆ ನೀಡಿ, ಶುಭ ಹಾರೈಸಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಿರಿಗೆರೆ ಮಂಜು, ಸಂಸ್ಥೆಯ ಅಧ್ಯಕ್ಷ ದೀಪಕ್ ಮೈಸೂರು ಇತರರಿದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಬಳ್ಳಾರಿಯ ಧಾತ್ರಿ ರಂಗ ತಂಡದಿಂದ ಬಾಹುಬಲಿ ವಿಜಯಂ ನಾಟಕ ಪ್ರದರ್ಶನಗೊಂಡಿತು.


‘ಸಂಚಲನ ರಂಗೋತ್ಸವ’ 13ರವರೆಗೆ ನಡೆಯಲಿದ್ದು, ಪ್ರತಿದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ಇರಲಿದೆ. ಮೇ 10ರಂದು ರಾಜೇಂದ್ರ ಕಾರಂತರ ರಚನೆಯ ಮುದ್ದಣ್ಣ ಪ್ರಮೋಷನ್ ಪ್ರಸಂಗ, ಮೇ 11ರಂದು ಜೋಗಿ ರಚನೆಯ ವಿಶ್ವಾಮಿತ್ರ ಮತ್ತು ಮೇನಕೆ ಡ್ಯಾನ್ಸ್ ಮಾಡೋದು ಏನಕೆ?, ಮೇ 12ರಂದು ಜಯರಾಮ್ ರಾಯಪುರ ರಚನೆಯ ‘ವಾರಸುದಾರ’ ನಾಟಕ, ಮೇ 13ರಂದು ಪರ್ವತವಾಣಿ ರಚನೆಯ ಹಗ್ಗದ ಕೊನೆ ಮತ್ತು ಟಿ.ಜಿ. ರಾಘವ ರಚನೆಯ ಪ್ರೇತಗಳು ನಾಟಕ ಪ್ರದರ್ಶನಗೊಳ್ಳಲಿದೆ.