ಜಿಲ್ಲೆ

ಬ್ರಿಟೀಷರಿಂದಲೇ ಪಠ್ಯ ಪುಸ್ತಕಗಳ ವಿರೂಪ: ಮಧುಸೂದನ ಆಯ್ಯರ್

ಗೋಪಾಲಕೃಷ್ಣ ಪಾದೂರ್

ಉಡುಪಿ : ಬ್ರಿಟೀಷರ ಕಾಲದಿಂದಲೇ ಪಠ್ಯ ಪುಸ್ತಕಗಳ ವಿರೂಪಗೊಂಡಿದ್ದು, ಇದರಿಂದ ಧರ್ಮವನ್ನೇ ಮರೆಯುವ ಪರಿಸ್ಥಿತಿ ಬಂದಿದೆ. ಬೇರೆ ಬೇರೆ ಜಾತಿ ಹಾಗೂ ಸಿದ್ಧಾಂತಗಳಿದ್ದರೂ, ಹಿಂದೂ ಧರ್ಮದ ವಿಚಾರಗಳು ನಮ್ಮನ್ನು ಜೋಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಕೊಡಿಯಾಲ್ ಬೈಲ್ ಘಟಕದ ಅಧ್ಯಕ್ಷ ಮಧುಸೂದನ ಅಯ್ಯರ್ ಹೇಳಿದರು.

ಶನಿವಾರ ಕಡಿಯಾಳಿ ದೇವಸ್ಥಾನದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆಯವರ 81ನೇ ಜನ್ಮೋತ್ಸವದ ನಿಮಿತ್ತ ನಡೆದ ಹಿಂದೂ ಏಕತಾ ಮೆರವಣಿಗೆ ಶೋಭಾಯಾತ್ರೆ ಸಮಾರೋಪ ಸಭೆಯಲ್ಲಿ ಮಾತನಾಡಿದರು.

ಸನಾತನ ಸಂಸ್ಥೆಯ ಲಕ್ಷ್ಮೀ ಪೈ ಮಾತನಾಡಿ, ಪ್ರತೀ ಒಬ್ಬ ಹಿಂದೂಗಳು ಧರ್ಮಾಚರಣೆ ಮತ್ತು ಅಧ್ಯಾತ್ಮಿಕ ಸಾಧನೆಯನ್ನು ಮಾಡಿ ಹಿಂದೂ ರಾಷ್ಟ್ರದ ಸ್ಥಾಪನೆಗೆ ಅರ್ಹರಾಗಬೇಕು ಎಂದರು. ವಿನೋದ್ ಕಾಮತ್ ಉಪಸ್ಥಿತರಿದ್ದರು.