ಜಿಲ್ಲೆ

ಸನಾತನ ಧರ್ಮ ವಿಶ್ವದಲ್ಲಿಯೇ ಶ್ರೇಷ್ಠ

ಹೊಸದುರ್ಗ: ನ್ಯಾಯದ ಹಾದಿಯಲ್ಲಿ ಸಾಗುವುದೇ ಧರ್ಮದ ತಳಹದಿ ಆಗಿದ್ದು, ಈ ದಾರಿಯಲ್ಲಿ ಸಾಗುವ ವ್ಯಕ್ತಿಗಳನ್ನು ಭಗವಂತ ರಕ್ಷಿಸುತ್ತಾನೆ ಎಂದು ಬೆಲಗೂರಿನ ಮಾರುತಿ ಪೀಠದ ಶ್ರೀ ವಿಜಯ ಮಾರುತಿ ಶರ್ಮ ಸ್ವಾಮೀಜಿ ತಿಳಿಸಿದರು.

20ನೇ ವರ್ಷದ ಗಣೇಶೋತ್ಸವದ ಆಂಗವಾಗಿ ಓಂ ಗಣಪತಿ ಭಕ್ತ ಮಂಡಳಿ ಪಟ್ಟಣದ ಆಶೋಕ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ಸನಾತನ ಹಿಂದು ಧರ್ಮವು ಎಲ್ಲರಿಗೂ ಒಳ್ಳೆಯದನ್ನು ಬಯಸುವ ಹಾಗೂ ಪರಸಹಿಷ್ಣುತೆಯನ್ನು ಹೊಂದಿರುವ ಶ್ರೇಷ್ಠ ಧರ್ಮವಾಗಿದೆ. ಧರ್ಮವನ್ನು ರಕ್ಷಿಸುವ ಕೆಲಸ ಇಂತಹ ಧಾರ್ಮಿಕ ಕಾರ್ಯಕ್ರಗಳಿಂದ ನಡೆಯುತ್ತಿದೆ. ಯುವಶಕ್ತಿ ಧರ್ಮದ ಕುರಿತು ಅಗತ್ಯ ಅರಿವು ಪಡೆಯುವ ಅಗತ್ಯವಿದೆ. ಮಕ್ಕಳಿಗೆ ಬಾಲ್ಯದಲ್ಲಿಯೆ ಉತ್ತಮ ಸಂಸ್ಕಾರ ನೀಡಿದರೆ ಅವರಲ್ಲಿ ಧರ್ಮ ಶ್ರದ್ಧೆ ಬೆಳೆಯುತ್ತದೆ ಎಂದರು.

ಮಾಜಿ ಶಾಸಕ ಟಿ.ಎಚ್.ಬಸವರಾಜಪ್ಪ, ಯುವ ಮುಖಂಡ ಬಿ.ಜಿ.ಅರುಣ್, ಟಿ.ಮಂಜುನಾಥ್, ಉದ್ಯಮಿ ಭರತ್ ಪಟೇಲ್, ಸಮಿತಿಯ ಅಧ್ಯಕ್ಷ ಎಸ್.ಕೆ.ಮಂಜುನಾಥ್, ಪುರಸಭಾ ಸದಸ್ಯ ಮಂಜುನಾಥ್, ಮಾಜಿ ಸದಸ್ಯ ಕೆ.ಆರ್.ಪ್ರವೀಣ್ ಮತ್ತಿತರರು ಇದ್ದರು.

ಶೋಭಾ ಯಾತ್ರೆ: ಓಂ ಗಣಪತಿ ಭಕ್ತ ಮಂಡಳಿ ಪ್ರತಿಷ್ಠಾಪಿಸಿರುವ 20ನೇ ವರ್ಷದ ಗಣೇಶ ಮೂರ್ತಿ ವಿಸರ್ಜನೆ ಹಿನ್ನೆಲೆಯಲ್ಲಿ ಸೆ.26ರ ಮಂಗಳವಾರ ಶೋಭಾಯಾತ್ರೆ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ.